ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಕಾರ್ಕಳ, ಸಿದ್ದಾಪುರ, ಹೊಸಂಗಡಿ ಬಳಿ ಸತ್ತ ಮಂಗಗಳು ಪತ್ತೆಯಾಗಿದ್ದವು. ಒಟ್ಟು 5 ಸಾವಿಗೀಡಾಗಿದ್ದ ಮಂಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗದ ವಿಡಿಎಲ್ಗೆ ಕಳುಹಿಸಲಾಗಿತ್ತು.
ಈ ಪರೀಕ್ಷೆಯಲ್ಲಿ ಮಂಗಗಳು ಕೆಎಫ್ಡಿ ಯಿಂದ ಸತ್ತಿರುವುದು ದೃಢಪಟ್ಟಿದೆ. ಈಗಾಗಲೆ ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ಕಟ್ಟೆಚ್ಚರ ಘೋಷಣೆಯಾಗಿದ್ದು, ಶಂಕಿತ ಜ್ವರದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.