ಫೇಸ್ಬುಕ್ಲ್ಲಿ ಪರಿಚಿತರಾದವರು ಮದುವೆನೂ ಆದ್ರು. ಆದ್ರೆ ಈಗ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ನಮ್ಮನ್ನು ಹುಡುಕಬೇಡಿ ಎಂದಿದ್ದ ಯುವತಿ ಒಂದೇ ವಾರದಲ್ಲಿ ವಾಪಸ್ ಓಡಿಬಂದು ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ಮತಾಂತರದ ಕೇಸ್ ದಾಖಲಿಸಿದ್ದಾಳೆ.
ವಾರದ ಹಿಂದೆ..!
ಶಿವಮೊಗ್ಗ ಶೇಷಾದ್ರಿಪುರಂನ ಸೈಯದ್ ಅಹ್ಮದ್ ಹಾಗೂ ಬಾಪೂಜಿನಗರದ ರೆಚಲ್ ಮಚಾಡೋ, ಫೇಸ್ಬುಕ್ಲ್ಲಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು, ನಂತರ ಪ್ರೀತಿ ಪ್ರೇಮ ಅಂತ ಸುತ್ತಾಡಿದ್ದರು. ಅಂತಧರ್ಮೀಯವರಾಗಿದ್ದರಿಂದ ಮನೆಯವರಿಂದ ವಿರೋಧವಿತ್ತು. ಕೊನೆಗೆ ಕಳೆದ ವಾರ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು.
ಪೋಷಕರು ತಮ್ಮ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಅಷ್ಟರಲ್ಲಿ ಇವರಿಬ್ಬರೂ ಒಟ್ಟಿಗೆ ಕೂತು ಒಂದು ವಿಡಿಯೋ ಮಾಡಿ, ಪೊಲೀಸರೇ ದಯವಿಟ್ಟು ನಮ್ಮನ್ನು ಹುಡುಕಬೇಡಿ ನಾವು ನಾಪತ್ತೆಯಾಗಿಲ್ಲ ಎಂದು ಮನವಿ ಮಾಡಿಕೊಂಡು ತಮ್ಮ ಸ್ನೇಹಿತರ ಮುಖಾಂತರ ಪೊಲೀಸರಿಗೆ ವಿಡಿಯೋ ತಲುಪಿಸುವ ಕೆಲಸ ಮಾಡಿದ್ದರು.
ವಾರಕ್ಕೆ ವರಸೆ ಬದಲಾಯ್ತು..!
ಒಂದೇ ವಾರಕ್ಕೆ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಈಗ ಪ್ರಕರಣ ದಾಖಲಿಸಿದ್ದು ಪ್ರಿಯಕರನೊಂದಿಗೆ ಹೋಗಿದ್ದ ರೆಚಲ್ ಮಚಾಡೋ..! ಈಕೆ ಕೊಟ್ಟ ದೂರಿನಲ್ಲಿ ಸೈಯದ್ ನನ್ನನ್ನು ಕಿಡ್ನಾಪ್ ಮಾಡಿ, ಅಕ್ರಮವಾಗಿ ಭಟ್ಕಳ ಲಾಡ್ಜ್ನಲ್ಲಿಟ್ಟಿದ್ದ. ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯಿಸಿದ್ದ ಎಂದು ದೂರಿದ್ದಾಳೆ.
ಆದರೆ ಸಯ್ಯದ್ ಮಾತ್ರ ನಾನು ಆಕೆಯನ್ನು ಬಲವಂತ ಮಾಡಿಲ್ಲ. ಆಕೆಯೇ ನನ್ನೊಂದಿಗೆ ಬಂದಿದ್ದು ಎನ್ನುತ್ತಿದ್ದಾನೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.