ನಗರದ ಕರ್ಜನ್ ಪಾಕ್೯ ಆವರಣದಲ್ಲಿ ನಡೆದ ಈ ಮೇಳದಲ್ಲಿ 220ಕ್ಕೂ ಬಗೆಯ ಗೆಡ್ಡೆ -ಗೆಣಸುಗಳನ್ನು ನೋಡಿದ ಸಾರ್ವಜನಿಕರ ಅವುಗಳ ಪೌಷ್ಠಿಕತೆ ಹಾಗೂ ಆರೋಗ್ಯದ ಲಾಭ ಕುರಿತ ಮಾಹಿತಿ ಪಡೆದರು. ಅಲ್ಲದೆ ಭರ್ಜರಿ ಖರೀದಿಯಲ್ಲಿ ಮುಳುಗಿದ್ದಾರೆ.
ತೋಟಗಾರಿಕೆ ಇಲಾಖೆ, ಸಹಜ ಸಮೃದ್ಧಿ ಸಂಸ್ಥೆ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಮೇಳ ಆಯೋಜಿಸಲಾಗಿತ್ತು.
ಹೆಚ್.ಡಿ. ಕೋಟೆ ತಾಲೂಕಿನ ಮಾನೆಮೂಲೆ ಹಾಡಿಯ ಗೆಡ್ಡೆ- ಗೆಣಸು, ಕಾಚಾಲು, ಮರಗೆಣಸು, ಮುಡೆಗೆಣಸು, ಸುವರ್ಣ ಗಡ್ಡೆ, ನಡಂ ಚಿನಾ, ಚೂರಾ, ಕಾಚಿಲ್, ನ್ಯಾರೋ, ಕಾಜಂಗು, ಅರಿ ಕಾಜುಂಗೂ ಹೀಗೆ ಅನೇಕ ಗೆಡ್ಡೆ ಗೆಣಸುಗಳ ಜೊತೆ ತರಕಾರಿಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
ಈ ಟಿವಿ ಭಾರತ್ನೊಂದಿಗೆ ಉತ್ತರಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಡಾ. ಶ್ರೀ ಕುಮಾರ್ ಮಾತನಾಡಿ, ಆಧುನಿಕತೆ ಬೆಳೆದಂತೆ ಹಲವಾರು ಬದಲಾವಣೆಗಳು ಆಗಿರಬಹುದು. ಆದರೆ, ಗೆಡ್ಡೆ ಗೆಣಸುಗಳು ಇಂದಿಗೂ ಪೌಷ್ಠಿಕತೆ ಹಾಗೂ ಆರೋಗ್ಯಯುತ ಶಕ್ತಿಯನ್ನು ನೀಡುತ್ತವೆ ಎಂದರು.