ಮುಖಪುಟMoreರಾಜ್ಯ
Redstrib
ಚಿತ್ರದುರ್ಗ
Blackline
ಚಿತ್ರದುರ್ಗ: ನಗರಕ್ಕೆ ನೀರು ಸರಬರಾಜು ಮಾಡುವ ವಾಣಿವಿಲಾಸ ಸಾಗರ ಮತ್ತು ಶಾಂತಿ ಸಾಗರದಿಂದ ಮತ್ತೊಂದು ಪೈಪ್‍ಲೈನ್ ಅಳವಡಿಕೆಯಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 122 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
Published 19-Jan-2018 19:00 IST
ಚಿತ್ರದುರ್ಗ: ಸುರಕ್ಷಿತ ತಾಯ್ತನ ಹಾಗೂ ಮಕ್ಕಳ ಆರೈಕೆಗಾಗಿ ಆರೋಗ್ಯ ಇಲಾಖೆಯ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ಮಾಡಿದರು.
Published 19-Jan-2018 19:02 IST
ಚಿತ್ರದುರ್ಗ: ಪ್ರಸಕ್ತ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಇದೇ ಜ. 28, 29 ಮತ್ತು 30 ರಂದು ಜಿಲ್ಲೆಯಾದ್ಯಂತ ಜರುಗಲಿದೆ. ಜಿಲ್ಲೆಯ 1,52,694 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದರು.
Published 18-Jan-2018 18:54 IST
ಚಿತ್ರದುರ್ಗ: ಮಾತೃಪೂರ್ಣ ಯೋಜನೆಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಜಿಲ್ಲಾ ಮಂಡಳಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
Published 17-Jan-2018 19:15 IST
ಚಿತ್ರದುರ್ಗ: ಸರ್ಕಾರ ಬೀದಿಬದಿ ವ್ಯಾಪಾರಸ್ಥರಿಗಾಗಿಯೇ ಕಾಯಿದೆ ಜಾರಿ ಮಾಡಿದೆ. ಅದನ್ನು ತಿಳಿದುಕೊಂಡು ಸಾಲ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಕರೆ ನೀಡಿದರು.
Published 17-Jan-2018 19:19 IST
ಚಿತ್ರದುರ್ಗ: ಮತದಾನ ಮಾಡುವ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಅದರಿಂದ ದೂರ ಉಳಿದು ವ್ಯವಸ್ಥೆಯನ್ನು ದೂರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದರು.
Published 17-Jan-2018 19:17 IST
ಚಿತ್ರದುರ್ಗ: ಅಲ್ಲಿ ಸ್ಟಾಲ್‍ಗಳನ್ನು ನಿರ್ಮಿಸಲಾಗಿತ್ತು. ಈ ಸ್ಟಾಲ್‍ಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಕುಳಿತು ಜನರನ್ನು ಕಾಯುತ್ತಿದ್ದರು. ಆದರೆ ಆಗೊಬ್ಬ, ಈಗೊಬ್ಬ ಎಂಬಂತೆ ಕೇವಲ ಬೆರಳೆಣಿಕೆಯ ಜನರು ಸ್ಟಾಲ್‍ಗಳ ಬಳಿ ಬಂದು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು.
Published 16-Jan-2018 18:39 IST
ಚಿತ್ರದುರ್ಗ: ಬರಗಾಲದಲ್ಲಿಯು ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ದಿನದಲ್ಲಿ 6 ರಿಂದ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು ರೈತರ ಪಂಪ್‍ಸೆಟ್‍ಗಳಿಗೆ ಹಗಲು ವೇಳೆಯೇ 6 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
Published 16-Jan-2018 19:50 IST | Updated 20:11 IST
ಚಿತ್ರದುರ್ಗ: ಉತ್ತರಾಯಣ ಪುಣ್ಯ ಪರ್ವಕಾಲ, ಸೂರ್ಯನು ತನ್ನ ಪಥ ಬದಲಿಸುವ ಕಾಲ. ರವಿಯು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ಮಕರ ಸಂಕ್ರಾಂತಿಯ ಶುಭ ಘಳಿಗೆಯನ್ನು ಜಿಲ್ಲೆಯಲ್ಲಿ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ನಸುಕಿನಲ್ಲಿ ಎದ್ದ ಮಹಿಳೆಯರು ಮನೆ ಹಾಗೂ ಮನೆಯ ಅಂಗಳವನ್ನು ಶುಚಿಗೊಳಿಸಿ ರಂಗೋಲಿ ಹಾಕಿ ಸಿಂಗರಿಸಿದರು.
Published 15-Jan-2018 19:29 IST
ಚಿತ್ರದುರ್ಗ: ಸಹಕಾರಿ ಸಂಘ ಸೇರುವುದೇ ಹಣವನ್ನು ದೋಚಲು ಎಂದು ಭಾವಿಸಿರುವ ಇಂದಿನ ಕಾಲದಲ್ಲಿ ಚಿತ್ರದುರ್ಗ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
Published 15-Jan-2018 19:32 IST
ಚಿತ್ರದುರ್ಗ: ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ ಸಂಕ್ರಾಂತಿ. ಸಮೃದ್ಧಿಯ ಸಂಕೇತವೂ ಆಗಿರುವ ಸಂಕ್ರಾಂತಿ ಹಬ್ಬ ಆಚರಣೆಗಾಗಿ ಸಾರ್ವಜನಿಕರು ನಗರದಲ್ಲಿ ಭಾನುವಾರ ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Published 14-Jan-2018 19:40 IST
ಚಿತ್ರದುರ್ಗ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್ ಸೂಚನೆ ನೀಡಿದ್ದಾರೆಂದು ಪಕ್ಷದ ಉಪಾಧ್ಯಕ್ಷ ಹಾಗೂ ಸಂಘಟನಾ ಉಸ್ತುವಾರಿ ಎನ್.ಮಂಜಪ್ಪ ತಿಳಿಸಿದರು.
Published 14-Jan-2018 19:36 IST
ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರೋ ನಾನು ಅರೆಸ್ಟ್ ಆಗಿರೋ ವಿಚಾರ ಸುಳ್ಳು ವದಂತಿ. ನಾನು ಯಾವುದೇ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಇದು ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಎಂದು ಬಿ. ಕಾಂತರಾಜ್ ಸ್ಪಷ್ಟನೆ ನೀಡಿದ್ದಾರೆ.
Published 14-Jan-2018 07:21 IST | Updated 07:24 IST
ಚಿತ್ರದುರ್ಗ: ಹಣಕ್ಕಾಗಿ ಕಿಡ್ನ್ಯಾಪ್, ದರೋಡೆ ಮಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೈಲು ಸೇರಿದ್ದಾರೆಂದು ಸುದ್ದಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಶನಿವಾರ ಪ್ರಸಾರವಾಗಿದೆ. ಇದು ನನಗೆ ಹಾಗೂ ಪಕ್ಷಕ್ಕೆ ನೋವುಂಟು ಮಾಡಿದೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಕಾಂತರಾಜ್ ತಿಳಿಸಿದ್ದಾರೆ.
Published 14-Jan-2018 19:38 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಪ್ರಕೃತಿಪ್ರಿಯರಿಗೆ ಇಲ್ಲಿವೆ ಕೆಲವು ಉತ್ತಮ ಪ್ರವಾಸಿ ತಾಣಗಳು
video playಬಾಹುಬಲಿ ಹಾಗೂ ಅದರ ಸುತ್ತಲಿನ ಪ್ರಮುಖ ತಾಣಗಳ ಬಗ್ಗೆ...
ಬಾಹುಬಲಿ ಹಾಗೂ ಅದರ ಸುತ್ತಲಿನ ಪ್ರಮುಖ ತಾಣಗಳ ಬಗ್ಗೆ...
video playಈ ನೀಲಿ ಜ್ವಾಲಾಮುಖಿಯ ಹಿಂದಿನ ಗುಟ್ಟೇನು?
ಈ ನೀಲಿ ಜ್ವಾಲಾಮುಖಿಯ ಹಿಂದಿನ ಗುಟ್ಟೇನು?

ವ್ಯಾಯಾಮ ಮಾಡಿದರೂ ಬೊಜ್ಜು ಕರುಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!
video playದೂರದೂರಿಗೆ ಪ್ರಯಾಣ ಮಾಡುವ ಮಧುಮೇಹಿಗಳಿಗೆ ಒಂದಿಷ್ಟು ಸಲಹೆ
ದೂರದೂರಿಗೆ ಪ್ರಯಾಣ ಮಾಡುವ ಮಧುಮೇಹಿಗಳಿಗೆ ಒಂದಿಷ್ಟು ಸಲಹೆ
video playಯಾತನಮಯ ನೋವು ನೀಡುವ ಅಪೆಂಡಿಕ್ಸ್‌ನ ಲಕ್ಷಣ, ಚಿಕಿತ್ಸೆ ಹೀಗಿದೆ...
ಯಾತನಮಯ ನೋವು ನೀಡುವ ಅಪೆಂಡಿಕ್ಸ್‌ನ ಲಕ್ಷಣ, ಚಿಕಿತ್ಸೆ ಹೀಗಿದೆ...