ಮಕ್ಕಳನ್ನು ಕೊಂದು ನೇಣಿಗೆ ಶರಣಾದ್ಲು ಅಮ್ಮ... ಪತ್ರದಲ್ಲಿದೆ ಕಣ್ಣೀರ ಕಥೆ!
ಸ್ಥಳೀಯ ಗ್ರಾಮ ಪಂಚಾಯತ್ ನೌಕರನ ಪತ್ನಿ ಶಿವಮ್ಮ(25), ಮಕ್ಕಳಾದ ಸಂತೋಷ್(2) ಹಾಗೂ 7 ತಿಂಗಳ ಮಗು ಸಾವಿಗೀಡಾಗಿದ್ದಾರೆ. ಶಿವಮ್ಮಳ ಇಬ್ಬರೂ ಮಕ್ಕಳಿಗೂ ಚರ್ಮರೋಗವಿತ್ತು ಎಂದು ಹೇಳಲಾಗಿದೆ. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ರೋಗ ನಿವಾರಣೆಯಾಗದ ಹಿನ್ನಲೆ ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ.
ಆತ್ಮಹತ್ಯೆಗೂ ಮುನ್ನ ಎರಡು ಪತ್ರ ಬರೆದಿರುವ ಶಿವಮ್ಮ, ಒಂದು ಪತ್ರದಲ್ಲಿ ತನ್ನ ಗಂಡನ ಕ್ಷಮೆ ಕೋರಿದ್ದಾಳೆ. ಮತ್ತೊಂದು ಪತ್ರದಲ್ಲಿ ಮಕ್ಕಳ ರೋಗದ ಬಗ್ಗೆ ಉಲ್ಲೇಖಿಸಿದ್ದಾಳೆ. ಆತ್ಮಹತ್ಯೆಗೂ ಮೊದಲು ತನ್ನ ಮಕ್ಕಳನ್ನು ಮನೆಯಲ್ಲಿದ್ದ ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ನಂತರ ಅವರನ್ನು ಚಾಪೆಯ ಮೇಲೆ ಮಲಗಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.