ಮುಖಪುಟMoreರಾಜ್ಯMoreದಕ್ಷಿಣ ಕನ್ನಡ
Redstrib
ದಕ್ಷಿಣ ಕನ್ನಡ
Blackline
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.5 ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
Published 24-May-2017 20:01 IST
ಮಂಗಳೂರು: ಮೂಡುಬಿದಿರೆ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್ ಹಾಗೂ ತಂಡ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಮಾಡುತ್ತಿದ್ದ ಎನ್ನಲಾದ ಬಿಜೆಪಿ ಕಾರ್ಯಕರ್ತನೋರ್ವನ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published 24-May-2017 08:36 IST
ಮಂಗಳೂರು: ಕುಡಿಯುವ ನೀರಿನ ಅವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆಯ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಹಾಗೂ ಎಸ್ಸಿ-ಎಸ್ಟಿ ಮೀಸಲು ನಿಧಿಯನ್ನು ಖರ್ಚು ಮಾಡದಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇರುವೈಲು ಗ್ರಾಮ ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸಿದರು.
Published 24-May-2017 19:56 IST
ಮಂಗಳೂರು: ಯೆಯ್ಯಡಿಯ ಆ್ಯಕ್ಸಿಸ್ ಬ್ಯಾಂಕ್‌ ಕರೆನ್ಸಿ ಚೆಸ್ಟ್‌ನಿಂದ 7.5 ಕೋಟಿ ರೂ. ಹಣವನ್ನು ಬೆಂಗಳೂರಿನ ಕೋರಮಂಗಲಕ್ಕೆ ವಾಹನದಲ್ಲಿ ಸಾಗಿಸುವ ವೇಳೆ ಹಣ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Published 24-May-2017 10:31 IST
ಧರ್ಮಸ್ಥಳ: ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಿಸಲು ಯತ್ನಿಸುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
Published 24-May-2017 08:00 IST
ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಆಪ್ತ ಕಾರ್ಯದರ್ಶಿ ಹರೀಶ್ (49) ಹೃದಯಾಘಾತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
Published 24-May-2017 07:50 IST
ಮಂಗಳೂರು: ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಂಗಳೂರಿನ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ.
Published 23-May-2017 17:07 IST
ಮಂಗಳೂರು: ವೈದ್ಯೆ ಅಧಿಕಾರಿಯೊಬ್ಬರ ನಿರ್ಲಕ್ಷ್ಯದಿಂದ ತನ್ನ ಪತ್ನಿಯು ಗರ್ಭಕೋಶವನ್ನೇ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ನರಳುವಂತಾಯಿತು ಎಂದು ಆರೋಪಿಸಿ ಹರೇಕಳದ ನಿವಾಸಿ ಹೈದರ್ ಎಂಬುವರು ಇದೀಗ ಸ್ಥಳೀಯ ಪೊಲೀಸರು, ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ.
Published 23-May-2017 08:16 IST
ಮಂಗಳೂರು: ಸಮುದ್ರಾಚೆಗಿನ ಊರುಗಳಿಂದ ತಮ್ಮ ಸ್ವಗ್ರಾಮಕ್ಕೆ ತೆರಳಲು ಆಕಾಶದೆತ್ತರದ ಆಶಾಭಾವನೆಯನ್ನು ಹೊತ್ತು ವಿಮಾನದಲ್ಲಿ ಬರುತ್ತಿರುವಾಗ ಇನ್ನೇನು ತಾವು ತಮ್ಮ ನೆಲವನ್ನು ಮುಟ್ಟುತ್ತಿದ್ದೇವೆ ಎನ್ನುವಷ್ಟರಲ್ಲಿ ದೇಶ ಕಂಡು ಕೇಳಯರಿದ ಘಟನೆಯೊಂದು ನಡೆದು ಹೋಗಿತ್ತು. ಅದು ಇಂದಿಗೆ ಏಳು ವರ್ಷ ತುಂಬಿದ್ದರೂ ನೋವು ಮಾತ್ರ ಹಾಗೇ ಉಳಿದಿದೆ.
Published 22-May-2017 12:32 IST
ಮಂಗಳೂರು: ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದ್ದಂತೆ ಅಲ್ಲಿನ ಕೆಲ ಅಂಗಡಿ ಮನೆಗಳು ಹಾನಿಗೊಳಗಾಗಿವೆ. ಜೊತೆಗೆ ಭಾನುವಾರ ಬಡಿದ ಸಿಡಿಲಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೂ ಹಾನಿಯಾಗಿದೆ.
Published 22-May-2017 13:56 IST
ಮಂಗಳೂರು: ಉವರ್ಸ್ಟೋರ್ ಬಳಿಯ ರೇಡಿಯೋ ಗುಡ್ಡೆಯಲ್ಲಿದ್ದ ಕೋಟೆ ಬಬ್ಬುಸ್ವಾಮಿ ದೇವಸ್ಥಾನದ ಕಟ್ಟಡ, ವೈದ್ಯನಾಥ ಯುವಕ ಮಂಡಲದ ಕಟ್ಟಡ ಮತ್ತು ದೈವಗಳ ಪೀಠಗಳನ್ನು ಏಕಾಏಕಿ ನೆಲಸಮಗೊಳಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೋಟೆದ ಬಬ್ಬುಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Published 22-May-2017 21:09 IST
ಮಂಗಳೂರು: ನಗರದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ವೈದ್ಯರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಪ್ರತಿಭಟನಾನಿರತ ವೈದ್ಯರ ಮನವಿ ಸ್ವೀಕರಿಸಿದರು.
Published 22-May-2017 20:33 IST
ಮಂಗಳೂರು: ವಿಮಾನ ದುರಂತದಲ್ಲಿ ಮಡಿದವರಿಗೆ ಸಚಿವ ರಮಾನಾಥ್‌ ರೈ ಸೇರಿದಂತೆ ಮೃತರ ಕುಟುಂಬಸ್ಥರು ಮತ್ತು ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
Published 22-May-2017 15:44 IST
ಮಂಗಳೂರು: ವೈದ್ಯರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಆಸ್ಪತ್ರೆಗಳ ಮೇಲಿನ ದಾಳಿ ಹಾಗೂ ಇತ್ತೀಚೆಗೆ ನಡೆದ ಹಿರಿಯ ವೈದ್ಯರು, ಹಿರಿಯ ನರ್ಸಿಂಗ್ ಸಿಬ್ಬಂದಿಯ ಮೇಲಿನ ಹಲ್ಲೆ ಖಂಡಿಸಿ ಇಂದು ದ.ಕ ಹಾಗೂ ಉಡುಪಿಯಲ್ಲಿ ವೈದ್ಯರು ಎಲ್ಲ ರೀತಿಯ ವೈದ್ಯಕೀಯ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
Published 22-May-2017 15:51 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ