ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಹೊಸಳ್ಳಿಯ ರೈತ ಸಂಜೀವ್ ಎಂಬುವರು ಗುರುವಾರ ಬಂಕಾಪುರಕ್ಕೆ ಪತ್ನಿಯ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಬ್ಯಾಗ ಕಳೆದುಕೊಂಡಿದ್ದರು. ಇದೇ ಮಾರ್ಗವಾಗಿ ಬಂದ ಹೆಸ್ಕಾಂ ಶಾಖಾಧಿಕಾರಿ ಚಾಮರಾಜ ಕುಲಮಿಗೆ ಈ ಬ್ಯಾಗ್ ಸಿಕ್ಕಿದೆ.
ಬ್ಯಾಗ್ ಸಿಕ್ಕ ಕೊಡಲೇ ಅದರಲ್ಲಿರುವ ವಿಳಾಸದಿಂದ ಬ್ಯಾಗ್ ಕಳೆದುಕೊಂಡವರನ್ನು ಪತ್ತೆ ಹಚ್ಚಿದ ಚಾಮರಾಜ ಅವರು ಬ್ಯಾಗ್ ಮರಳಿಸಿದ್ದಾರೆ. ಚಾಮರಾಜರ ಈ ಪ್ರಮಾಣಿಕತೆಗೆ ಹೆಸ್ಕಾಂ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.