ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಕುರಿತಂತೆ ಇವತ್ತು ಕಲಬುರ್ಗಿಯಲ್ಲಿ ಮಾತನಾಡಿದ ಅವರು, ನಮ್ಮ ಸೋದರ ಉಮೇಶ್ ಜಾಧವ್ ಜತೆಗೆ ಅತೃಪ್ತ ನಾಲ್ವರು ಶಾಸಕರೂ ಸಂಪರ್ಕದಲ್ಲಿದ್ದಾರೆ. ಎಲ್ಲರೂ ಒಮ್ಮತದ ನಿರ್ಧಾರ ಪಡೆದು ಇನ್ನೆರಡ್ಮೂರು ದಿನದಲ್ಲಿ ರಾಜೀನಾಮೆ ಕೂಡಬಹುದು. ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾದ ಅಭಿವೃಧ್ಧಿ ಸಾಧ್ಯವಾಗುತ್ತಿಲ್ಲ ಎಂಬ ಅಸಮಾನದಾನ ಜಾಧವ್ ಅವರಿಗೆ ಇದೆ. ಆ ಕಾರಣದಿಂದ ಜಾಧವ್ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದರು.
ಶಾಸಕರು ಮತ್ತು ಕ್ಷೇತ್ರದ ಜನತೆ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಜಾಧವ್ ಅವರಿಗೆ ಮರ್ಯಾದೆ ಸಿಗುತ್ತಿಲ್ಲ. ಬಿಜೆಪಿ ಸೇರ್ಪಡೆಗೆ ಕುಟುಂಬದಿಂದಲೂ ಸಂಪೂರ್ಣ ಬೆಂಬಲ ಇದೆ ಅಂತಾ ರಾಮಚಂದ್ರ ಜಾಧವ್ ಸ್ಪಷ್ಟಪಡಿಸಿದರು.