ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ಅನ್ನಭಾಗ್ಯದ ಹೆಸರು ಬೇಳೆಯ ಲಕ್ಷಾಂತರ ಖಾಲಿ ಪ್ಲಾಸ್ಟಿಕ್ ಬ್ಯಾಗ್ಗಳು ಪತ್ತೆಯಾಗಿವೆ.
5ದೊಡ್ಡ ಚೀಲಗಳಲ್ಲಿ 1ಕೆಜಿಯ ಸಾವಿರಾರು ಖಾಲಿ ಬ್ಯಾಗ್ಗಳು ಪತ್ತೆಯಾಗಿವೆ. ಬೇಳೆಯನ್ನು ಅಕ್ರಮವಾಗಿ ಮಾರಾಟ ಮಾಡಿ ಚೀಲಗಳನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.