ನಗರದ ಗಾಂಧಿ ಭವನದಲ್ಲಿ ಸಂಧ್ಯಾ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ, ಮಹಾದೇವತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್, ತಾವು ಮೊದಲ ಬಾರಿ ಶಕುನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದನ್ನು ನೆನೆದು ಭಾವುಕರಾದರು. ಸಂಘ, ಸಂಸ್ಥೆಗಳನ್ನು ಕಟ್ಟಬೇಕಾದರೇ ಹಿರಿಯರ ಸಲಹೆ, ಸೂಚನೆಗಳು ಅಗತ್ಯ ಎಂದು ಸಲಹೆ ನೀಡಿದರು . ಅಲ್ಲದೇ ಸ್ಥೆಯ ಹುಟ್ಟು, ಬೆಳವಣಿಗೆ, ಸಮಸ್ಯೆಗಳು ಬಗ್ಗೆ ಬೆಳಕು ಚೆಲ್ಲಿದರು..
ಸಂಧ್ಯಾ ಸಾಹಿತ್ಯ ವೇದಿಕೆ:
25 ವರ್ಷಗಳಿಂದ ನಿರಂತರವಾಗಿ ಸಂಧ್ಯಾ ಸಾಹಿತ್ಯ ವೇದಿಕೆಯನ್ನು ಮುನ್ನೆಡೆಸಿರುವ ರವಿ ಹಿರೇಮಠ, ಮಾತನಾಡಿ, ಈ ವೇದಿಕ ಮಕ್ಕಳ ಸಾಹಿತ್ಯದ ಬಗ್ಗೆ ಕೆಲಸ ಮಾಡುತ್ತಾ ಬಂದಿದೆ ಎಂದರು. ಸರ್ಕಾರದ ಧನಹಾಯ ಪಡೆಯದೆ, ಪ್ರಾದೇಶಿಕ ಸಂಸ್ಥೆಯೊಂದಿಗೆ ಸಂಧ್ಯಾ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಮಾಡ್ತಾ ಬಂದಿದೆ ಎಂದರು. ಸಂಸ್ಥೆ ಮಕ್ಕಳ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಮಹನೀಯರಿಗೆ ವಿದ್ಯಾ ಸಾಗರ ಬಾಲ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ. 16 ವರ್ಷದ ಒಳಗಿನ ಮಕ್ಕಳಿಗೆ ಈ ಪ್ರಶಸ್ತಿ ನೀಡುಲಿದೆ. ಈ ವರ್ಷ ಕೀರ್ತನ ಹೆಗಡೆ ಶಿವಮೊಗ್ಗ ಅವರಿಗೆ ಲಭಿಸಿದೆ ಎಂದು ರಾಜಶೇಖರ್ ಕುಕ್ಕುಂದಾ ತಿಳಿಸಿದರು. ಈ ವೇಳೆ ಮಕ್ಕಳ ಸಾಹಿತ್ಯ ಬಗ್ಗೆ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಮಂಗಳೂರು ಆಕಾಶವಾಣಿ ಮುಖ್ಯಸ್ಥೆ ಎಸ್.ಉಷಾಲತಾ ದೂರವಾಣಿ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಎರಡನೇ ದಿನದ ಗೋಷ್ಠಿಗಳು:
ಕಥೆ, ಕಾದಂಬರಿ, ಕವಿತೆ, ಕಾದಂಬರಿ ಸುಗ್ಗಿ, ಕನ್ನಡದಲ್ಲಿ ಮಕ್ಕಳ ಕಥೆ ನನ್ನ ಗ್ರಹಿಕೆ, ಪಾರೊ ಆನಂದ ಅವರ ಮಕ್ಕಳ ಕಾದಂಬರಿ, ನೋ ಗನ್ಸ್ ಎಟ್ ಮೈ ಸನ್ಸ್ ಫ್ಯೂನರೆಲ್, ಕಥೆ ಕಾದಂಬರಿಗಳ ವಿಸ್ತ್ರತವಾದ ತೊಡಗಿಕೊಳ್ಳುವಿಕೆಗಳು, ಕವಿತೆ ಮುಟ್ಟಿಸುವ ಸಾಧ್ಯತೆಗಳು, ನನ್ನ ಬರವಣಿಗೆ ಆಸಕ್ತಿ ಎನ್ನುವ ವಿಷಯಗಳ ಬಗ್ಗೆ ಗೋಷ್ಠಿ ನಡೆಯಿತು.ಕಾರ್ಯಮ್ರಮದಲ್ಲಿ, ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್.ಮಂಜುನಾಥ, ಡಾ.ಅರವಿಂದ ಪಟೇಲ್, ಕೆ.ಶಿವಲಿಂಗಪ್ಪ ಹಂದಿಹಾಳು, ಮಕ್ಕಳು, ಸಾಹಿತಿಗಳು,ಕವಿಗಳು ಭಾವಹಿಸಿದ್ದರು.