ಶಿವಮ್ಮ(70) ಮೃತಪಟ್ಟ ದುರ್ದೈವಿ. ಬಹಿರ್ದೆಸೆಗೆ ತೆರಳಿದ್ದ ವೇಳೆ ಏಕಾಏಕಿ ಬೀಡುಬಿಟ್ಟಿದ್ದ ಆನೆ ಹಿಂಡು ದಾಳಿ ಮಾಡಿ, ತುಳಿದು ಹಾಕಿವೆ. ಇನ್ನು, ವಿಷಯ ತಿಳಿಯುತ್ತಿದ್ದಂತೆ ಕುಪಿತಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಿಂದಲೂ ಶಂಕರದೇವರ ಬೆಟ್ಟದ ತಪ್ಪಲಿನ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಈ ಕುರಿತು ಅರಣ್ಯಾಧಿಕಾರಿ ಶಂಕರ್ ಈನಾಡು ಇಂಡಿಯಾಗೆ ಪ್ರತಿಕ್ರಿಯಿಸಿ ಆನೆಗಳು ದಾರಿ ತಪ್ಪಿ ಗೊಂದಲಕ್ಕೀಡಾಗಿದ್ದು, ನಿನ್ನೆ ರಾತ್ರಿ 11 ರವರೆಗೂ ಕಾರ್ಯಾಚರಣೆ ನಡೆಸಿದ್ದೇವೆ, ಇಂದು ನಾನೂ ಕೂಡ ಸ್ಥಳಕ್ಕೆ ತೆರಳುತ್ತಿದ್ದು ಆನೆಗಳನ್ನು ಕಾಡಿಗಟ್ಟಲಾಗುವುದು. ಕೊಳ್ಳೇಗಾಲದ ಕಡೆಯಿಂದ ಅವುಗಳು ಬಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.