ಮಹಿಳೆಯರ ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ, ಅಲ್ಲಿನ ಕರ್ತವ್ಯನಿರತ ಕಾರ್ಮಿಕರ ಕುಂದು-ಕೊರತೆ ಆಲಿಸಿದರು. ತದನಂತರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಅಥಣಿ ಘಟಕ ವ್ಯವಸ್ಥಾಪಕ ಅಪ್ಪಣ್ಣ ಛಬ್ಬಿ, ಸಹಾಯಕ ಸಂಚಾರ ಅಧೀಕ್ಷಕ ಜಗದಾಳ ಹಾಗೂ ಇತರೇ ಘಟಕದ ತಾಂತ್ರಿಕ ಹಾಗೂ ಚಾಲನಾ ಸಿಬ್ಬಂದಿ ಉಪಸ್ಥಿತರಿದ್ದರು.