ಹೌದು, ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜ.31ರಂದು ನಡೆಯಲಿರುವ ಎ ಡಿವಿಜನ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಎಸ್. ವಿ ಸುನಿಲ್ ಆಚಾರ್ಯ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಹಾಕಿ ತವರು ಕೊಡಗಿನ ಬಹುತೇಕ ಮಂದಿ ಇದ್ದಾರೆ.
ಉಪನಾಯಕ ಎಸ್. ಕೆ ಉತ್ತಪ್ಪ, ವಿ. ಆರ್ ರಘುನಾಥ್, ವಿಕ್ರಮ್ ಕಾಂತ್, ಶಮಂತ್, ತಮ್ಮಣ್ಣ, ಅಪ್ಪಚ್ಚು, ಸೇರಿದಂತೆ ಇನ್ನೂ ಕೆಲವು ಕೊಡಗು ಮತ್ತು ಇತರೆ ಜಿಲ್ಲೆಯ ಹಾಕಿ ಪಟುಗಳಿದ್ದಾರೆ. ಇಬ್ಬರು ಗೋಲ್ ಕೀಪರ್ ಗಳಾದ ಚೇತನ್, ಅಟಲ್ ದೇವ್ ಸಿಂಗ್ ಚಹಾಲ್ ಇದ್ದು, ಕೋಚ್ಗಳಾಗಿ ಕಾರ್ಯಪ್ಪ ಕೆ. ಟಿ, ಕಾರ್ಯಪ್ಪ ಬಿ.ಜೆ ತರಬೇತಿ ನೀಡಿದ್ದು, ಮ್ಯಾನೇಜರ್ ಆಗಿ ರಿಖಿ ಗಣಪತಿ, ಫಿಸಿಯೋಥೆರಪಿಸ್ಟ್ ಆಗಿ ಅಪ್ಪಣ್ಣ ತಂಡದಲ್ಲಿದ್ದಾರೆ.