ಅಪ್ಪನ ಹಾದಿಯಲ್ಲೇ ಮಗ... 14 ವರ್ಷಕ್ಕೆ ಜೂನಿಯರ್ ನ್ಯಾಷನಲ್ ಚಾಂಪಿಯನ್ ಆದ ಗೋಪಿಚಂದ್ ಪುತ್ರ
ತನ್ನ ತಂದೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಹಾಗೂ ಸಹೋದರಿ ಗಾಯತ್ರಿ ಅವರ ಹಾದಿ ತುಳಿದಿರುವ ಸಾಯಿ ವಿಷ್ಣು, ರಾಷ್ಟ್ರೀಯ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯ ಅಂಡರ್-15 ವಿಭಾಗದಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಫೈನಲ್ನಲ್ಲಿ 14 ವರ್ಷದ ವಿಷ್ಣು, ಸಾಯಿ ಸತ್ಯ ಸರ್ವೇಶ್ ಅವರನ್ನು 21-14, 21-19 ನೇರ ಸೆಟ್ಗಳಿಂದ ಮಣಿಸುವ ಮೂಲಕ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಾಯಿ ವಿಷ್ಣು ಗೋಪಿಚಂದ್ ಅಕಾಡೆಮಿಯಲ್ಲೇ ಸೈನಾ, ಸಿಂದುರಂತಹ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯರ ಜೊತೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ಸಹೋದರಿ ಗಾಯಿತ್ರಿ ಕೂಡ ಬ್ಯಾಡ್ಮಿಂಟನ್ನಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.