ಆಸ್ಟ್ರೇಲಿಯಾ ನೆಲದ ಮೊದಲ ಟೆಸ್ಟ್ನಲ್ಲಿ ಸೆಂಚುರಿ ಬಾರಿಸಿರುವ ಚೇತೇಶ್ವರ್ ಪೂಜಾರ 5ಸಾವಿರ ರನ್ ಪೂರೈಸಿ ಮುನ್ನಡೆದಿದ್ದಾರೆ. 108 ಇನ್ನಿಂಗ್ಸ್ಗಳಲ್ಲಿ ಚೇತೇಶ್ವರ್ ಈ ಮೈಲಿಗಲ್ಲು ಮುಟ್ಟಿದ್ದಾರೆ. ವಿಶೇಷ ಎಂದರೆ, ದ್ರಾವಿಡ್ ಎಷ್ಟು ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 5 ಸಾವಿರ ರನ್ ಪೂರೈಸಿದ್ದರೋ ಅಷ್ಟೇ ಇನ್ನಿಂಗ್ಸ್ಗಳಲ್ಲಿ ಪೂಜಾರ ಸಹ ಗುರಿ ತಲುಪಿದ್ದಾರೆ. ಹೀಗಾಗಿ ಇದು ಕಾಕತಾಳಿಯಯೋ ಇಲ್ಲ ಆಕಸ್ಮಿಕವೋ ಎಂಬ ಚರ್ಚೆ ಅವರ ಅಭಿಮಾನಿಗಳಲ್ಲಿ ನಡೆಯುತ್ತಿದೆ.
ಇಲ್ಲಿದೆ ರಾಹುಲ್ - ಪೂಜಾರ ಹೋಲಿಕೆ ರನ್ ದ್ರಾವಿಡ್( ಇನ್ನಿಂಗ್ಸ್) ಪೂಜಾರ (ಇನ್ನಿಂಗ್ಸ್)
3000 runs 67 67
4000 runs 84 84
5000 runs 108 108
ಈ ಅಂಕಿ- ಅಂಶ ನೋಡಿದರೆ ಅಚ್ಚರಿ ಆಗದಿರದು. ದ್ರಾವಿಡ್ ರಂತೆ ಪೂಜಾರ ಸಹ ನೆಲ ಕಚ್ಚಿ ನಿಂತು ಆಡ್ತಾರೆ. ವಿದೇಶಿ ನೆಲದಲ್ಲೂ ವೇಗದ ಬೌಲರ್ಗಳನ್ನ ಎದುರಿಸಿ ಕೆಚ್ಚೆದೆಯ ಆಟ ಆಡುವುದು ಪೂಜಾರಗೆ ಕರಗತವಾಗಿದೆ. ಇಂಗ್ಲೆಂಡ್ನಲ್ಲಿ ಮೊದಲಿಗೆ ಪೂಜಾರ ಕೈಬಿಡಲಾಗಿತ್ತು. ಭಾರತ ಸೋಲಿನ ಹಿನ್ನಲೆಯಲ್ಲಿ ಹಿರಿಯ ಆಟಗಾರರ ಟೀಕೆ ಬಳಿಕ ಪೂಜಾರ ಅವರನ್ನ ಟೆಸ್ಟ್ಗೆ ಅವಕಾಶ ಕಲ್ಪಿಸಲಾಗಿತ್ತು.
ಈ ವರ್ಷದಲ್ಲಿ ವಿದೇಶಿ ನೆಲದಲ್ಲಿ ಬಾರಿಸಿರುವ ಎರಡನೇ ಸೆಂಚುರಿ ಇದು. ಸೌಥಾಂಪ್ಟನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪೂಜಾರ ಶತಕ ಬಾರಿಸಿ ಟೀಂ ಇಂಡಿಯಾ ಮಾನ ಕಾಪಾಡಿದ್ದರು. ಇನ್ನು ಎರಡು ಅರ್ಧ ಶತಕ ಗಳಿಸುವ ಮೂಲಕ ವಿದೇಶಿ ನೆಲದಲ್ಲಿ ನಮ್ಮನ್ನು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದನ್ನ ಪೂಜಾರ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.