ರೋಹಿತ್ ಶರ್ಮಾ ಪತ್ನಿ ರಿತಿಕಾ ತಮ್ಮ ಪುತ್ರಿ ಸಮೈರಾ ನಗುತ್ತಿರುವ ವೀಡಿಯೋವೊಂದನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿದ್ದೆಗೆ ಜಾರಿರುವ ಸಮೈರಾ, ನಿದ್ದೆ ಕಣ್ಣಲ್ಲೆ ಕ್ಯೂಟ್ ಆದ ಸ್ಮೈಲ್ ನೀಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಮೈರಾ ಸ್ಮೈಲ್, ರೋಹಿತ್ ಶರ್ಮಾ ಅವರ ಸ್ಮೈಲ್ನಂತೇ ಇದೆ ಅಂತ ಹಲವರು ಕಮೆಂಟ್ ಮಾಡಿದ್ದಾರೆ.
ರೋಹಿತ್ ಮತ್ತು ರಿತಿಕಾ 2015ರ ಡಿಸಿಂಬರ್ ತಿಂಗಳಲ್ಲಿ ಹಸೆಮಣೆ ಏರಿದ್ದರು. ಕಳೆದ ಡಿಸೆಂಬರ್ 31ರಲ್ಲಿ ಜನಿಸಿದ್ದ ಈ ಹೆಣ್ಣು ಮಗುವಿಗೆ ಸಮೈರಾ ಎಂದು ಹೆಸರಿಟ್ಟಿದ್ದರು.