ಹೈಟೆನ್ಷನ್ ಮ್ಯಾಚ್ ಮೇಲೇ ಎಲ್ಲರ ಕಣ್ಣು... ನೆಟ್ನಲ್ಲಿ ಬೆವರಿಳಿಸ್ತಿದ್ದಾರೆ ಮಾಜಿ ನಾಯಕ ಧೋನಿ!
ಕೃಪೆ: BCCI Twitter
ನಾಳೆ ಇಂಡೋ-ಪಾಕ್ ಮಧ್ಯೆ ಬಿಗ್ ಫೈಟ್ ನಡೆಯಲಿದೆ. ಈಗಾಗಲೇ ಭಾರತ ತಂಡ ಪಂದ್ಯವನ್ನಾಡಲು ಸನ್ನದ್ಧವಾಗಿದೆ. ತಂಡಕ್ಕೆ ನಾಯಕ ರೋಹಿತ್ ಶರ್ಮಾ ಆದ್ರೂ ಎಲ್ಲರ ಚಿತ್ತ ಮಾಜಿ ನಾಯಕ ಧೋನಿ ಮೇಲಿದೆ. ಹೀಗಾಗಿ ಧೋನಿಗೆ ಈ ಪಂದ್ಯ ಪ್ರತಿಷ್ಠಿತವಾಗಿದ್ದು, ನೆಟ್ನಲ್ಲಿ ಭರ್ಜರಿ ಪ್ರ್ಯಾಕ್ಟೀಸ್ ನಡೆಸಿದ್ದಾರೆ.
ಇನ್ನು ಧೋನಿ 2017ರಲ್ಲೇ ಏಕದಿನ ಮತ್ತು ಟಿ-20 ಫಾರ್ಮಟ್ ನಾಯಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಭಾರತೀಯ ಕಾಲಮಾನ ಪ್ರಕಾರ ನಾಳೆ ಸಂಜೆ 5 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂಡಿಯಾ-ಪಾಕ್ ನಡುವೆ ಪಂದ್ಯ ನಡೆಯಲಿದೆ.