ಸಾಮಗ್ರಿಗಳು - ಬೆಣ್ಣೆ - 1 ಕಪ್
- ಈರುಳ್ಳಿ - 1 ಕಪ್
- ಎಣ್ಣೆ - 2 tsp
- ಬಿರ್ಯಾನಿ ಎಲೆ - 1
- ಚೆಡ್ಡರ್ ಚೀಸ್ - 100 gm
- ಕ್ರೀಮ್ 1 ಕಪ್
- ಮಯೋನಿಸ್ - 4 tbsp
- ಪೆಪ್ಪರ್ ಪೌಡರ್ - 1 tsp
- ಪಾರ್ಸ್ಲಿ - 1 tsp
- ಉಪ್ಪು - ರುಚಿಗೆ
ತಯಾರಿಸುವ ವಿಧಾ ನ- ಒಂದು ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಈರುಳ್ಳಿ ಸೇರಿಸಿ ಹುರಿಯಿರಿ.
- ಇದರೊಂದಿಗೆ ಎಣ್ಣೆ, ಬಿರ್ಯಾನಿ ಎಲೆ ಸೇರಿಸಿ ತಿರುವಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 15 ನಿಮಿಷ ಕುಕ್ ಮಾಡಿ.
- ಬಿರ್ಯಾನಿಎಲೆ ತೆಗೆದು ಈರುಳ್ಳಿಯೊಂದಿಗೆ ಚೆಡ್ಡರ್ ಚೀಸ್ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
- ಒಂದು ಬೌಲ್ನಲ್ಲಿ ಕ್ರೀಮ್, ಮಯೊನೀಸ್, ಪೆಪ್ಪರ್ ಪೌಡರ್, ಉಪ್ಪು, ಪಾರ್ಸ್ಲಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಇದರೊಂದಿಗೆ ಈರುಳ್ಳಿ, ಚೀಸ್ ಮಿಶ್ರಣ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
- ಬ್ರೆಡ್ ಸ್ಟಿಕ್, ಬಿಸ್ಕೆಟ್, ಚಿಪ್ಸ್ ಅಥವಾ ತರಕಾರಿಗಳನ್ನು ಡಿಪ್ನೊಂದಿಗೆ ಎಂಜಾಯ್ ಮಾಡಿ.