ಕೃಪೆ:twitter
ಕೆಂಪು ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯ ಹೇಗೆಲ್ಲ ಲಾಭ ನೋಡಿ:
ಜೀರ್ಣಕ್ರಿಯೆಗೆ ಸಹಕಾರಿ: ನಿತ್ಯ ಆಹಾರಕ್ಕೆ ಸೇರಿಸಿಕೊಳ್ಳಬಹುದಾದ ಉತ್ತಮ ಆಹಾರ ಸೊಪ್ಪು ಕೆಂಪು ಹರಿವೆ. ಇದರಲ್ಲಿ ಡಯೆಟ್ರಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಆರೋಗ್ಯವಾಗಿರಲು ಉತ್ತಮ ಆಹಾರ.
ಅನಿಮಿಯಾ ಸಮಸ್ಯೆಯನ್ನು ತಡೆಯುತ್ತದೆ: ಅನಿಮಿಯಾ ಅಥವಾ ಹಿಮೊಗ್ಲೊಬಿನ್ ಮಟ್ಟ ಕಡಿಮೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಂಪು ಹರಿವೆ ಸೊಪ್ಪು ಉತ್ತಮ ಆಹಾರ. ನಿಂಬೆ ರಸದ ಜೊತೆಗೆ ಹರಿವೆ ರಸವನ್ನು ಬೆರೆಸಿ ಪ್ರತಿ ವಾರ ಸೇವಿಸುವುದರಿಂದ ಅನಿಮಿಯಾ ಸಮಸ್ಯೆಯಿಂದ ದೂರವುಳಿಯಬಹುದು.
ಕಿಡ್ನಿ ಸಮಸ್ಯೆಗೆ ಉತ್ತಮ: ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು , ಮತ್ತು ದೇಹದ ಅಂಗಗಳನ್ನು ಸ್ವಚ್ಛಗೊಳಿಸಲು ಹರಿವೆ ಸೊಪ್ಪಿನ ಸೇವನೆ ಉತ್ತಮ.
ಕೂದಲಿನ ಆರೋಗ್ಯಕ್ಕೂ ಉತ್ತಮ: ಕೆಂಪು ಹರಿವೆ ಸೊಪ್ಪಿನ ಪೇಸ್ಟ್ ತಯಾರಿಸಿ ಕೂದಲಿಗೆ ಮತ್ತು ನೆತ್ತಿಗೆ ಹಚ್ಚುವುದರಿಂದ ಕೂದಲ ಬೆಳವಣಿಗೆಗೆ ಸಹಕಾರಿಯಾಘುತ್ತದೆ ಮತ್ತು ಡ್ಯಾಂಡ್ರಫ್ ನಂತಹ ಸಮಸ್ಯೆಗಳು ದೂರವಾಗಿ ಕೂದಲಿಗೆ ಕಾಂತಿ ಸಿಗುತ್ತದೆ.
ತೂಕ ಇಳಿಕೆಗೆ ಸಹಕಾರಿ: ಕೆಂಪು ಹರಿವೆ ಸೊಪ್ಪಿನಲ್ಲಿರುವ ಪ್ರೊಟೀನ್ ಅಂಶ ಹಸಿವನ್ನು ನಿಯಂತ್ರಿಸುವ ಮೂಲಕ ಪದೇ ಪದೇ ತಿನ್ನಬೇಕು ಎಂಬ ಚಪಲವನ್ನು ಕಡಿಮೆ ಮಾಡಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.