ಇಲ್ಲಿದೆ ಕೆಲವು ಫ್ಯಾಶನ್ ಮಿಸ್ಟೇಕ್ಗಳ ಸೊಲ್ಯೂಶನ್...
ಬ್ರೈಟ್ ಕಲರ್ : ಎರಡು ಬ್ರೈಟ್ ಕಲರ್ಗಳನ್ನು ಜೊತೆಯಾಗಿ ಧರಿಸುವುದು ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ನೀವಿದನ್ನು ಇಂಟರೆಸ್ಟಿಂಗ್ ಮಾಡಬಹುದು. ನೀವು ಅದನ್ನು ಸರಿಯಾದ ಆಕ್ಸೆಸರೀಸ್ ಜೊತೆ ಸೆಟ್ ಮಾಡಿ.
ಹೈ ಹೀಲ್ಸ್ : ಹೀಲ್ಸ್ ನಿಮ್ಮ ಲುಕ್ನ ಸ್ಪಾರ್ಕ್ ಹೆಚ್ಚಿಸುವ ಕೆಲಸವನ್ನು ಸಹ ಮಾಡುತ್ತದೆ. ಆದರೆ ನೀವು ತುಂಬಾ ಹೈಟ್ ಇದ್ದರೆ ಈ ಮಾತು ಸುಳ್ಳಾಗುತ್ತದೆ. ಯಾಕೆಂದರೆ ಹೈ ಹೀಲ್ಸ್ ನಿಮಗೆ ಮ್ಯಾಚ್ ಆಗೋದಿಲ್ಲ.
ದೊಡ್ಡದಾದ ಪ್ರಿಂಟ್ಸ್ : ಗುಂಪಿನ ಮಧ್ಯದಲ್ಲಿ ಎದ್ದು ಕಾಣಲು ನೀವು ಸ್ವಲ್ಪ ಡಿಫರೆಂಟ್ ಆಗಿ ಡ್ರೆಸ್ ಮಾಡೋದು ಬೆಸ್ಟ್. ಅದಕ್ಕಾಗಿ ನೀವು ಹಾರಿಜಾಂಟಲ್, ಸ್ಪೋಟಿಂಗ್ ಮತ್ತು ದೊಡ್ಡದಾದ ಪ್ರಿಂಟ್ ಡ್ರೆಸ್ ಧರಿಸಬಹುದು.
ಮ್ಯಾಕ್ಸಿ ಡ್ರೆಸ್ : ನಿಮ್ಮ ಹೈಟ್ ಕಡಿಮೆ ಇದ್ದರೆ ಮ್ಯಾಕ್ಸಿ ಮತ್ತು ಲಾಂಗ್ಸ್ ಡ್ರೆಸ್ ನಿಮಗೆ ಚೆನ್ನಾಗಿ ಕಾಣಿಸುವುದಿಲ್ಲ. ಸರಿಯಾದ ಹೈ ಹೀಲ್ ಅಥವಾ ಫೂಟ್ವೇರ್ ಧರಿಸಿದರೆ ನೀವು ಇನ್ನೂ ಚೆನ್ನಾಗಿ ಕಾಣುತ್ತೀರಿ.
ಡೆನಿಮ್ ಜೊತೆ ಡೆನಿಮ್ : ಡೆನಿಮ್ನ ಒಂದು ವಿಶೇಷತೆ ಎಂದರೆ ಇದು ಯಾವತ್ತೂ ಔಟ್ ಆಫ್ ಫ್ಯಾಷನ್ ಆಗುವುದಿಲ್ಲ. ಯಾವ ಸೀಸನ್ಗೂ ಸಹ ಇದು ಬೆಸ್ಟ್ ಔಟ್ಫಿಟ್ ಆಗಿರುತ್ತದೆ. ಡೆನಿಮ್ಗೆ ಸರಿಯಾದ ಫೂಟ್ವೇರ್ ಹಾಕುವುದು ಸಹ ಮುಖ್ಯವಾಗಿದೆ.