ಹೌದು..,
ಮೊದಲ
ಬಾರಿಗೆಯಾಗಲಿ ಅಥವಾ ಅನುಭವ
ಪಡೆದವರೇ ಆಗಲಿ,
ಸಂದರ್ಶನವನ್ನು
ಎದುರಿಸಬೇಕಾದರೆ ಭಯ ಇದ್ದೇ
ಇರುತ್ತೆ.
ಯಾಕೆಂದರೆ
ಕೆಲಸಕ್ಕೆ ಸೇರುವಾಗ ನಡೆಸುವ
ಸಂದರ್ಶನಗಳು ಅಭ್ಯರ್ಥಿಯು
ತನ್ನನ್ನು ತಾನು ಎಷ್ಟರ ಮಟ್ಟಿಗೆ
ಅರಿತುಕೊಂಡಿದ್ದಾನೆ ಎನ್ನುವುದರ
ಮೇಲೆ ನಿಂತಿರುತ್ತೆ.
ಸಂದರ್ಶಕರು
ತಾವು ಆಯ್ಕೆ ಮಾಡುವ ಅಭ್ಯರ್ಥಿಯ
ಜೀವನದ ಗುರಿಗಳೇನು,
ಅವರು
ಯಾವೆಲ್ಲ ವಿಷಯಗಳಲ್ಲಿ ಅರ್ಹತೆ
ಹೊಂದಿದ್ದಾರೆ,
ಹಾಗೆ
ತಮ್ಮ ಸಂಸ್ಥೆಗೆ ಎಷ್ಟರ ಮಟ್ಟಿಗೆ
ಸೂಕ್ತ ಎಂಬುದನ್ನು ಪರಿಗಣಿಸುತ್ತಾರೆ.
ಸಾಮಾನ್ಯವಾಗಿ
ಸಂದರ್ಶನಕ್ಕೆ ಹೋಗುವವರು ಎದುರಿಸುವ
ಕಷ್ಟಗಳು ಹೀಗಿವೆ:
ಸರಿಯಾದ
ಸಿದ್ಧತೆ ಇಲ್ಲದಿರುವುದು:ಸಂದರ್ಶನಕ್ಕೆ
ಅಣಿಯಾಗುವುದೆಂದರೆ ಕಾಲೇಜಿನ
ಪರೀಕ್ಷೆಗೆ ತಯಾರಿ ನಡೆಸಿದ
ತರಹವಲ್ಲ.
ಇಂತಹ
ಸಂದರ್ಶನಗಳು ಹೀಗೆ ಇರುತ್ತವೆ
ಎಂದು ಹೇಳಲೂ ಸಾಧ್ಯವಿಲ್ಲ.
ಆದರೆ
ಈ ಮೊದಲು ಸಂದರ್ಶನದಲ್ಲಿ ಪಾಲ್ಗೊಂಡವರ
ಬಳಿ ಅವರ ಅನುಭವವನ್ನು ಕೇಳಿ,
ಅದಕ್ಕೆ
ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕು.
ನೀವು
ಹೋಗುತ್ತಿರುವ ಸಂಸ್ಥೆಯ ಕುರಿತು
ತಿಳಿದುಕೊಳ್ಳಬೇಕು.
ಇಲ್ಲದಿದ್ದರೆ
ಸಂದರ್ಶನದ ಸಮಯದಲ್ಲಿ ಸಂದರ್ಶಕರ
ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ
ಇರಬಹುದು.
ನಮ್ಮ
ಬಗ್ಗೆ ನಮಗೆ ಜ್ಞಾನವಿಲ್ಲದಿರುವುದು:
ಸಂದರ್ಶನಕ್ಕೆ
ಹೋಗುವ ಮೊದಲು ಅಭ್ಯರ್ಥಿಗೆ ನಾವು
ನಮ್ಮ ಜೀವನದಲ್ಲಿ ಏನನ್ನು ಸಾಧಿಸಲು
ಹೊರಟಿದ್ದೇವೆ ಎನ್ನುವುದರ
ಅರಿವಿರಬೇಕು.
ಕೆಲಸಕ್ಕೆ
ತೆಗೆದುಕೊಳ್ಳುವ ಸಂಸ್ಥೆಗಳು
ಅಭ್ಯರ್ಥಿಯು ಹಲವು ವರ್ಷಗಳ ತನಕ
ತಮ್ಮಲ್ಲಿಯೇ ಕೆಲಸ ಮಾಡಲು
ಸಿದ್ಧನಿದ್ದಾನೆಯೇ ಅಥವಾ
ಮಧ್ಯದಲ್ಲಿಯೇ ಬಿಟ್ಟು ಹೋಗುವವನೇ
ಎಂಬ ಆಂಶಗಳನ್ನು ಗಮನಿಸುತ್ತಾರೆ.
ಹಾಗಾಗಿಯೇ
ಈ ಕುರಿತ ಪ್ರಶ್ನೆಗಳು ಸಂದರ್ಶನದಲ್ಲಿ
ಹೆಚ್ಚಾಗಿರುತ್ತವೆ.
ಉದಾಹರಣೆಗೆ:
ನೀವು
ಯಾಕೆ ಈ ಕೆಲಸಕ್ಕೆ ಸೇರಲು ಇಷ್ಟ
ಪಡುತ್ತಿದ್ದೀರಿ?
ಯಾಕೆ
ನೀವು ನಮ್ಮ ಸಂಸ್ಥೆಗೆ ಕೆಲಸಕ್ಕೆ
ಸೇರಲು ಇಚ್ಛಿಸುತ್ತೀರಿ?
ಇನ್ನು
5-10
ವರ್ಷಗಳ
ನಂತರ ನಿಮ್ಮನ್ನು ನೀವು ಯಾವ
ಹಂತದಲ್ಲಿ ನೋಡಲಿಚ್ಛಿಸುತ್ತಿರಿ?
ಇಂತಹ
ಪ್ರಶ್ನೆಗಳಿಗೆ ಉತ್ತರಿಸುವಾಗ
ಅಭ್ಯರ್ಥಿಯು ಆತನ ಜೀವನದ ಯೋಜನೆಗಳು
ಆತ ಯಾವುದಾದರೂ ವಿಷಯದ ಮೇಲೆ
ಹೊಂದಿರುವ ಜ್ಞಾನ ಮತ್ತು ಕೌಶಲ್ಯದ
ಕುರಿತು ಮಾತನಾಡಬೇಕಾಗುತ್ತದೆ.
ಜೊತೆಗೆ
ಸಂಸ್ಥೆಯ ಕುರಿತು ತಿಳಿದುಕೊಂಡು,
ಅ
ಸಂಸ್ಥೆಯಿಂದ ಹೇಗೆ ತನ್ನನ್ನು
ತಾನು ಅಭಿವೃದ್ಧಿಗೊಳಿಸಿಕೊಳ್ಳಬಹುದು
ಎಂಬ ವಿಷಯದ ಕುರಿತೂ ಮಾತನಾಡಬೇಕಾಗುತ್ತದೆ.
ಸಂದರ್ಶನದಲ್ಲಿ
ಹೆಚ್.
ಆರ್
ಸುತ್ತಿನಲ್ಲಿ ಕೇಳುವ ಪ್ರಶ್ನೆಗಳು
ಸಂದರ್ಶನದ
ಈ ಸುತ್ತು ಸ್ವಲ್ಪ ಕ್ಲಿಷ್ಟವಾಗಿರುತ್ತದೆ.
ಆದರೆ
ಸಂದರ್ಶನದ ಬಹುಪಾಲು ನಿರ್ಧಾರಗಳು
ಈ ಸುತ್ತಿನ ಮೇಲೆ ನಿಂತಿರುತ್ತದೆ.
ಪ್ರಶ್ನೆಗಳ
ಉತ್ತರಗಳು ತಪ್ಪು ಅಥವಾ ಸರಿ
ಎಂದಿರುವುದಿಲ್ಲ,
ಇಲ್ಲಿ
ಕೇಳುವ ಪ್ರಶ್ನೆಗಳು ಅಭ್ಯರ್ಥಿಯು
ತನ್ನನ್ನು ತಾನು ಎಷ್ಟು
ಅರಿತುಕೊಂಡಿದ್ದಾನೆ ಎಂಬುದನ್ನು
ವಿಶ್ಲೇಷಿಸುತ್ತದೆ.
ಉದಾಹರಣೆಗೆ:
ನಿಮ್ಮ
2
ಮಿತಿಗಳನ್ನು
ತಿಳಿಸಿ ಅಥವಾ ನೀವು ಯಾವ 2
ವಿಷಯದಲ್ಲಿ
ನೈಪುಣ್ಯರು?
ನಿಮ್ಮ
ಬಗ್ಗೆ ನಿಮ್ಮ ಗೆಳೆಯರ ಬಳಿ ಕೇಳಿದರೆ
ಏನೆಂದು ಹೇಳಬಹುದು?
ಇಲ್ಲಿ
ತನಕ ನೀವು ಅನುಭವಿಸಿದ ದೊಡ್ಡ
ಸೋಲು ಯಾವುದು?
ಕೆಲಸಕ್ಕೆ
ಸೇರಿದ ಮೊದಲ ದಿನ ಏನು ಮಾಡುವಿರಿ?
ಇಂತಹ
ಪ್ರಶ್ನೆಗಳು ನಿಮ್ಮ ಬಗ್ಗೆ ನೀವೆ
ಮಾತನಾಡುವಂತೆ ಮಾತಡುತ್ತವೆ.
ಆದರೆ
ಉತ್ತರಿಸುವಾಗ ನಿಮ್ಮ ಮಾತಿನಲ್ಲಿ
ಉತ್ಪ್ರೇಕ್ಷತೆಗಳಿರಬಾರದು,
ಯಾವುದನ್ನು
ಹೇಳಿದರೆ ಸೂಕ್ತ ಎಂದು ಯೋಚಿಸಿ
ಮಾತನಾಡಿ.
ಸಂದರ್ಶನಗಳಲ್ಲಿ
ಅಭ್ಯರ್ಥಿಯ ಆಯ್ಕೆಯ ಸಮಯದಲ್ಲಿ
ಆತನ ನಡವಳಿಕೆ,
ಮಾತನಾಡುವ
ಪರಿ,
ಡ್ರೆಸ್ಸಿಂಗ್
ಸೆನ್ಸ್ ಎಲ್ಲವೂ ಗಣನೆಗೆ
ಒಳಪಡುತ್ತವೆ.
ಹಾಗಾಗಿ
ತಿಳಿ ಬಣ್ಣದ ಫಾರ್ಮಲ್ ಉಡುಪುಗಳನ್ನು
ಧರಿಸುವುದು ಉತ್ತಮ.
ಸಂದರ್ಶನದಲ್ಲಿ
ಆದಷ್ಟು ವಿವಾದಕ್ಕೀಡು ಮಾಡುವ
ಮಾತುಗಳನ್ನು,
ಉತ್ತರಗಳನ್ನು
ನೀಡಬೇಡಿ.
ಸಂದರ್ಶಕರು
ಹೆಚ್ಚಾಗಿ ಸೈದ್ಧಾಂತಿಕ ವಿಷಯಗಳಿಗಿಂತ
ಪ್ರಯೋಗಾತ್ಮಕ ವಿಷಯಗಳ ಕುರಿತು
ಜಾಸ್ತಿ ಒಲವು ತೋರುತ್ತಾರೆ.
ಅವರಿಗೆ
ಅಭ್ಯರ್ಥಿಯು ತಾನು ಕಲಿತಿದ್ದನ್ನು
ಯಾವ ರೀತಿ ಪ್ರಯೋಗಾತ್ಮಕವಾಗಿ
ಬಳಸಬಲ್ಲ ಎಂಬುದರ ಮಾಹಿತಿ ಬೇಕು.
ಹಾಗಾಗಿ
ಟೆಕ್ನಿಕಲ್ ವಿಷಯಗಳ ಕುರಿತು
ತಿಳಿದುಕೊಳ್ಳಿ.
ಸಂದರ್ಶನಕ್ಕೆ
ಹೋಗುವಾಗ ಸ್ವಲ್ಪ ಭಯ ಸಾಮಾನ್ಯ.
ಆದರೆ,
ನಿಮ್ಮ
ಮೇಲೆ ನಿಮಗೆ ವಿಶ್ವಾಸವಿರಲಿ.
ಕಾಲೇಜು
ಓದಿನ ಜೊತೆ ಆದಷ್ಟು ನಿಮ್ಮ ಬಗ್ಗೆ
ನೀವು ತಿಳಿದುಕೊಳ್ಳಲು ಪ್ರಯತ್ನಿಸಿ.
ನಿಮ್ಮ
ಜೀವನದ ಗುರಿ ತಲುಪಲು ಮಾಡಬೇಕಾದ
ಕೆಲಸಗಳ ಬಗ್ಗೆ ಇಂದೇ ಲಿಸ್ಟ್
ಮಾಡಿಟ್ಟುಕೊಳ್ಳಿ.