ಈ ಯಶಸ್ವಿ ವ್ಯಕ್ತಿಗಳ್ಯಾರೂ ಡಬಲ್ ಡಿಗ್ರಿ ಮಾಡಿದವರೇ ಅಲ್ಲ...
ಇಲ್ಲಿದೆ ಯಾವುದೇ ಡಿಗರಿ ಪಡೆದುಕೊಳ್ಳದೇ ಟೆಕ್ ಸಾಮ್ರಾಜ್ಯವನ್ನು ಆಳುತ್ತಿರುವ ಯಶಸ್ವಿ ಉದ್ಯಮಿಗಳು...
ಸ್ಟೀವ್ ಜಾಬ್ಸ್ - ಆ್ಯಪಲ್
ಆ್ಯಪಲ್ ಕಂಪನಿಯ ಒಡೆಯ ಸ್ಟೀವ್ ಜಾಬ್ಸ್ ತನ್ನ 19ನೇ ವಯಸ್ಸಿನಲ್ಲಿಯೇ ವಿದ್ಯಾಭ್ಯಾಸ ಕೊನೆಗೊಳಿಸಿದರು. ನಂತರ ಇವರನ್ನು ಕ್ಯಾನ್ಸರ್ ಬಾಧಿಸಿತು, ಆದರೆ ಅದನ್ನು ಮರೆತು ತಮ್ಮ ಕೊನೆಯುಸಿರು ಇರುವವರೆಗೂ ಐಫೋನ್, ಐಪೋಡ್ಗಳನ್ನು ತಯಾರಿಸಿ ತಂತ್ರಜ್ಞಾನ ಜಗತ್ತಿಗೆ ಕೊಡುಗೆಯಾಗಿ ಕೊಟ್ಟರು.
ಬಿಲ್ ಗೇಟ್ಸ್ - ಮೈಕ್ರೋಸಾಫ್ಟ್
ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ಗೇಟ್ಸ್ 20 ವಯಸ್ಸಿನಲ್ಲಿ ಕಾಲೇಜಿನಿಂದ ಹೊರನಡೆದರು. ನಂತರ ಇವರು ಮೈಕ್ರೋಸಾಫ್ಟ್ ಎಂಬ ಲೀಡಿಂಗ್ ಪಿಸಿ ಮತ್ತು ಲ್ಯಾಪ್ಟಾಪ್ ಓಎಸ್ ಬ್ರಾಂಡ್ ಕಂಪನಿ ಆರಂಭಿಸಿದರು. ಇಲ್ಲಿವೆರಗೂ ಸಹ ಇದೇ ಪ್ರಪಂಚದ ಲೀಡಿಂಗ್ ಪಿಸಿ ಆಪರೇಟಿಂಗ್ ಕಂಪನಿಯಾಗಿದೆ.
ಮಿಚೆಲ್ - ಡೆಲ್-ಡೆಲ್
ಮಿಚೆಲ್ ಕಂಪನಿ ತಯಾರಿಸುವ ಡೆಲ್ ಡೆಲ್ ಲ್ಯಾಪ್ಟಾಪ್ ಮತ್ತು ಪಿಸಿಯನ್ನು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಇಷ್ಟಪಡುತ್ತಾನೆ. 19 ವಯಸ್ಸಿನಲ್ಲಿ ವಿದ್ಯಾಭ್ಯಾಸ ಕೊನೆಗೊಳಿಸಿ ತನ್ನದೇ ಬ್ರಾಂಡ್ ನಿರ್ಮಾಣ ಮಾಡುವತ್ತ ಇವರು ಸಾಗಿದರು.
ಈವನ್ ವಿಲಿಯಮ್ಸ್ - ಟ್ವಿಟ್ಟರ್
ಚೆನ್ನಾಗಿ ಟ್ವೀಟ್ ಮಾಡಿದರೆ ಎಲ್ಲರೂ ನಿಮ್ಮನ್ನು ಫಾಲೋ ಮಾಡುತ್ತಾರೆ. ಈವನ್ ಸಹ ತನ್ನ 20ನೇ ವಯಸ್ಸಿನಲ್ಲಿ ಕಾಲೇಜಿಗೆ ಗುಡ್ಬೈ ಹೇಳಿ ಬಿಲಿಯನ್ ಡಾಲರ್ ಗಳಿಸಲು ಕಠಿಣ ಶ್ರಮಪಟ್ಟರು. ಇದೀಗ ಟ್ವಿಟ್ಟರ್ ಖಾತೆ ಎಲ್ಲಾ ಜನರ ಫೆವರಿಟ್ ಸಾಮಾಜಿಕ ಜಾಲತಾಣವಾಗಿದೆ.
ಜಾನ್ ಕೌಮ್ - ವಾಟ್ಸ್ಅಪ್
ಇದೀಗ ಜನಪ್ರಿಯತೆ ಪಡೆದಿರುವ ವಾಟ್ಸ್ಅಪ್ ಜನಕ ಜಾನ್ ಕೌಮ್ 21 ನೇ ವಯಸ್ಸಿನಲ್ಲಿ ಕಾಲೇಜಿನಿಂದ ಹೊರಬಂದಿದ್ದರು.
ಮಾರ್ಕ್ ಜುಕನ್ಬರ್ಗ್ - ಫೇಸ್ಬುಕ್
ಮಾರ್ಕ್ ಜುಕನ್ಬರ್ಗ್ ಬಗ್ಗೆ ನೀವೇ ಎಷ್ಟೋ ವಿಷಯಗಳನ್ನು ಕೇಳಿರುತ್ತೀರಿ. ಸಾಮಾಜಿಕ ಜಾಲತಾಣದಲ್ಲಿ ಅಧಿಪತ್ಯ ಸಾಧಿಸಿರುವ ಫೇಸ್ಬುಕ್ನ ಒಡೆಯ ಜುಕನ್ಬರ್ಗ್. ಈ ಬಿಲೇನಿಯರ್ ತನ್ನ 20ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕೆ ಗುಡ್ಬೈ ಹೇಳಿದ್ದರು.