ಕೃಪೆ: Twitter
ಇಷ್ಟೋಂದು ಪ್ರಕೃತಿ ಸೌಂದರ್ಯವಿರುವ ಬೀಚ್ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ? ಅದೇ ದೇವಬಾಗ್ ಬೀಚ್. ಕಾರವಾರದ ಈ ಬೀಚ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ, ಆದರೆ ಬೀಚ್ನಲ್ಲಿ ಸ್ವಲ್ಪ ಸಮಯ ಕಳೆಯಬೇಕು ಎಂದು ಅರಸಿ ಬರುವವರಿಗೆ ದೇವ್ಬಾಗ್ ಬೀಚ್ ಮೊದಲ ಆಯ್ಕೆಯಾಗುವುದು ಪಕ್ಕಾ.
ಈ ಬೀಚ್ನ ವಿಶೇಷತೆ ಏನು? ರಜೆಯನ್ನು ಮಜವಾಗಿ ಕಳೆಯಲು ಏನೆಲ್ಲಾ ಸೌಕರ್ಯವಿದೆ ನೋಡಿ.
ಪಶ್ಚಿಮದಲ್ಲಿ ಹರಡಿರುವ ಅರಬ್ಬೀ ಸಮದ್ರ, ಪೂರ್ವದಲ್ಲಿ ಘಟ್ಟಗಳ ಸಾಲು, ಸಮುದ್ರದ ದಡದಲ್ಲಿ ಬಣ್ಣದ ಕಪ್ಪೆಚಿಪ್ಪುಗಳ ಚಿತ್ತಾರ. ಪೇಟೆ ಜೀವನದ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ದೇವಬಾಗ್ ಬೀಚ್ ಉತ್ತಮ ಸ್ಥಳ.
ದೇವಬಾಗ್ ಬೀಚ್ ತಲುಪಲು ಎರಡು ದಾರಿಗಳಿವೆ. ಗೋವಾ ಮೂಲಕ ಬರುವುದಾದರೆ, ಅಲ್ಲಿಂದ ಬೀಚ್ 22 ಕಿ.ಮೀ ದೂರದಲ್ಲಿದೆ. ಕಾರವಾರದ ಮೂಲಕ ಬರುವುದಾದರೆ ಅಲ್ಲಿಂದ ಬಿಚ್ 3 ಕಿ.ಮೀ ಬೋಟ್ ಮೂಲಕ ಬೀಚ್ಗೆ ಬರಬಹುದು. ಬೆಂಗಳೂರಿನಿಂದ ಸುಮಾರು 520 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ.
ದೇವ್ಬಾಗ್ ಬೀಚ್ನಲ್ಲಿ ವಸತಿಗೆ ಕಾಟೆಜಸ್, ಫಿಶರ್ಮ್ಯಾನ್ ಹಟ್ಸ್, ಸ್ಲಿಟ್ಸ್ ಹೀಗೆ ವಿವಿಧ ರೀತಿಯ ಎಲ್ಲಾ ಸೌಕರ್ಯಗಳುಳ್ಳ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ದ್ವೀಪ ಜೀವನದ ಸಣ್ಣ ಅನುಭವವನ್ನೂ ಇಲ್ಲಿ ಪಡೆಯಬಹುದು.
ಗೋಲ್ಘರ್ ಮಾದರಿಯಲ್ಲಿ ಪ್ರವಾಸಿಗಳಿಗೆ ಡೈನಿಂಗ್ ಸೌಲಭ್ಯವನ್ನು ಕೂಡ ನೀಡಲಾಗಿದೆ. ಸಸ್ಯಾಹಾರ, ಮಾಂಸಾಹಾರ, ಎರಡೂ ರೀತಿಯ ರುಚಿಕರ ಆಹಾರವನ್ನು ಇಲ್ಲಿ ಪಡೆಯಬಹುದು. ಫಿಶ್ ಪ್ರಿಯರಿಗೆ ಇಲ್ಲಿನ ಫಿಶ್ ಊಟ ರುಚಿ ಹೆಚ್ಚಿಸುತ್ತದೆ.
ಜಲ ಕ್ರೀಡೆ ಅಥವಾ ವಾಟರ್ ಸ್ಪೋರ್ಟ್ಸ್ ಇಷ್ಟಪಡುವವರಿಗೆ ದೇವ್ಬಾಗ್ ಹೇಳಿ ಮಾಡಿಸಿದ ಸ್ಥಳ. ಪ್ರಾರಾ ಸೈಲಿಂಗ್, ಸ್ನಾರ್ಕ್ಲಿಂಗ್, ಸ್ಪೀಡ್ ಬೋಟ್ ಕ್ರೂಸಸ್, ಬನಾನಾ ಬೋಟ್ ರೈಡ್ ಹೀಗೆ ವಿವಿಧ ರೀತಿಯ ವಾಟರ್ ಸ್ಪೋರ್ಟ್ಸ್ಗಳಿಗೆ ಇಲ್ಲಿ ಅವಕಾಶವಿದೆ. ಇದರ ಜೊತೆಗೆ ಕಾಳಿ ನದಿ ಸಮುದ್ರ ಸೇರುವ ಜಾಗದಲ್ಲಿ ಡಾಲ್ಫಿನ್ಗಳ ಆಟವನ್ನು ಕೂಡ ಕಣ್ತುಂಬಿಕೊಳ್ಳಬಹುದು.
ಹೀಗಾಗಿ ನಿಮ್ಮ ರಜಾ ದಿನಗಳನ್ನು ಮಜವಾಗಿ ಸ್ವಲ್ಪ ಅಡ್ವೆಂಚರ್ ಆಗಿ ಕಳೆಯಲು ಕಾರವಾರದ ದೇವ್ಬಾಗ್ ಬೀಚ್ಗೆ ಒಮ್ಮೆ ಭೇಟಿ ಕೊಡಿ.