ಈ ಹಿಂದೆ ಡೆಕ್ಕನ್ ಏವಿಯೇಷನ್ ಲಿಮಿಟೆಡ್ ಎಸ್ಬಿಐನಿಂದ 340 ಕೋಟಿ ರೂ. ಸಾಲ ಮಾಡಿತ್ತು. ಈ ಸಾಲಕ್ಕೆ ಜಿ. ಆರ್ ಗೋಪಿನಾಥ್ ಅವರೇ ಸಹಿ ಹಾಕಿದ್ದರು. ಈ ನಡುವೆ ಡೆಕ್ಕನ್ ಏವಿಯೇಷನ್ ಅನ್ನು ಕಿಂಗ್ಫಿಶರ್ ಮಾರಾಟದ ವೇಳೆ ಅಂದರೆ 2008 ರಲ್ಲಿ ಗೋಪಿನಾಥ್ ಅವರಿಗೆ ಕಿಂಗ್ ಫಿಶರ್ನಿಂದ 30 ಕೋಟಿ ರೂ ನೀಡಲಾಗಿತ್ತು. ಈ ಹಣಕಾಸು ವ್ಯವಹಾರದ ಬಗ್ಗೆ ವಿಚಾರಣೆಗೆ ಸಿಬಿಐ ನಿರ್ಧರಿಸಿದೆ.
ವಿಶೇಷ ಎಂದರೆ ಇದೇ ಸಂದರ್ಭದಲ್ಲಿ ಎಸ್ಬಿಐ ಕಿಂಗ್ಫಿಶರ್ ಏರ್ಲೈನ್ಸ್ಗೆ 29.96 ಕೋಟಿ ರೂ.ಗಳನ್ನ ಫೆಬ್ರವರಿ 1 2008 ರಂದು ಬಿಡುಗಡೆ ಮಾಡಲಾಗಿದೆ.
ಈ ನಡುವೆ ಮಲ್ಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈ 30 ಕೋಟಿ ರೂ ಹಣ ಬಿಡುಗಡೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಗೋಪಿನಾಥ್ ಹೈಕೋರ್ಟ್ಗೆ ಅಥವಾ ಮಧ್ಯಸ್ಥಗಾರರ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ. ಇದೇ ವಿಷಯವಾಗಿ ಸಿಬಿಐ ಗೋಪಿನಾಥರನ್ನ ವಿಚಾರಣೆ ಒಳಪಡಿಸಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಜಿ. ಆರ್. ಗೋಪಿನಾಥ್ ಲಭ್ಯರಿಲ್ಲ ಎಂದು ಹೇಳಲಾಗಿದೆ.