ಬೌಲಿಂಗ್ ವೇಳೆ ಚೆಂಡು ಬಡಿದು ಮೈದಾನದಲ್ಲಿ ಕುಸಿದು ಬಿದ್ದ ಟೀಂ ಇಂಡಿಯಾ ವೇಗಿ... ಡಾಕ್ಟರ್ ಹೇಳಿದ್ದೇನು?
ಟೀಂ ಇಂಡಿಯಾದ ವೇಗದ ಬೌಲರ್ ಅಶೋಕ್ ದಿಂಡಾ ಬೌಲಿಂಗ್ ಮಾಡುತ್ತಿದ್ದ ವೇಳೆ ಆತ ಎಸೆದ ಚೆಂಡನ್ನು ಬ್ಯಾಟ್ಸ್ಮನ್ ಜೋರಾಗಿ ಹೊಡೆದಿದ್ದಾನೆ. ಅದು ನೇರವಾಗಿ ಬೌಲರ್ ತಲೆಗೆ ಬಿದ್ದಿರುವ ಕಾರಣ, ತಕ್ಷಣ ಆತ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ಥಳಕ್ಕೆ ವೈದ್ಯರ ತಂಡ ಬಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ತದನಂತರ ಸಿಟಿ ಸ್ಕ್ಯಾನ್ ಕೂಡ ಮಾಡಿದ್ದು, ಆತನಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಘಟನೆ ನಡೆದ ಬಳಿಕ ಬೌಲರ್ ದಿಂಡಾ ಮತ್ತೊಮ್ಮೆ ಮೈದಾನಕ್ಕಿಳಿದು ಬೌಲಿಂಗ್ ಮಾಡಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬೆಂಗಾಳ ತಂಡ ಮುಸ್ತಾಕ್ ಅಲಿ ಚಾಂಪಿಯನ್ಸ್ ಟಿ-20 ಟೂರ್ನಿಗಾಗಿ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ.