ಸುರೇಂದ್ರನಗರ್ ಸಂಸದ, ಬಿಜೆಪಿ ಹಿರಿಯ ನಾಯಕ ದೇವ್ಜಿಭಾಯ್ ಫತೇಫರ ತಮ್ಮ ಆಪ್ತರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನಡೆದ ಸಂಭ್ರಮಾಚರಣೆಯಲ್ಲಿ ದೇವ್ಜಿಬಾಯ್ ಕೈಯಲ್ಲಿ ಖಡ್ಗ ಹಿಡಿದು ಕುಣಿದಾಡಿದ್ದಾರೆ. ನೂರಾರು ಮಂದಿಯೊಂದಿಗೆ ಬಹಿರಂಗವಾಗಿ ಖಡ್ಗ ಹಿಡಿದು ಕುಣಿದಾಡಿದ್ದು ಚರ್ಚೆಗೀಡಾಗಿದೆ.
ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.