ಪುಂಡನಿಗೆ ಪಿಎಸ್ಐ ಡಿಚ್ಚಿ... ವಿಡಿಯೋ ವೈರಲ್
ನಡುರಸ್ತೆಯಲ್ಲೇ ಪುಂಡನಿಗೆ ಪಿಎಸ್ಐ ಡಿಚ್ಚಿ ಹೊಡೆದಿದ್ದು ಆ ವಿಡಿಯೋ ಇದೀಗ ವೈರಲ್ ಆಗಿದೆ.
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟಲ್ಲಿ ಗ್ಲುಷನ್ ಶಾದಿ ಮಾಲ್ ಕಮಿಟಿಗೆ ಎಲೆಕ್ಷನ್ ನಡೆಯುತ್ತಿತ್ತು. ಈ ವೇಳೆ ಎಲೆಕ್ಷನ್ ಮುಗಿದ ಬಳಿಕ ಸಾರ್ವಜನಿಕರಿಗೆ ಹೋಗುವಂತೆ ಇನ್ಸ್ಪೆಕ್ಟರ್ ಹೇಳಿದ್ದರು.
ಇದಕ್ಕೆ ನಮಗೆ ಹೋಗುವಂತೆ ಹೇಳ್ತಿಯಾ ಎಂದು ಅಲ್ಲಿನ ಯುವಕರು ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ನಾಗರಾಜ್ಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪಿಎಸ್ಐ ಕಿರಣ್ ಪುಂಡ ಯುವಕರ ಜೊತೆ ವಾಗ್ವಾದ ನಡೆದು ಕೊನೆಗೆ ಪಿಎಸ್ಐ ಪುಂಡನಿಗೆ ಡಿಚ್ಚಿ ಹೊಡೆದಿದ್ದಾರೆ. ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.