ಚಿತ್ರಕೃಪೆ; ಫೇಸ್ಬುಕ್
ಹಾಚಿಕೋ ಎಂಬ ಶ್ವಾನ ಪ್ರೀತಿ, ನಂಬಿಕೆ ಎಂತಹದು ಎಂಬುದನ್ನು ಜಗತ್ತಿನ ಮನುಕುಲಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಆದರೆ, ಇಲ್ಲೊಂದು ಶ್ವಾನ ಸಹ ತನ್ನ ಸ್ನೇಹಿತನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದು 'ಹಾಚಿಕೋ'ವನ್ನೇ ನೆನಪಿಸುವಂತ್ತಿದೆ.
ಜಗತ್ತಿನ ಅತಿ ಸುಂದರ ನಾಯಿ ಎಂದು ಗುರುತಿಸಿಕೊಂಡಿದ್ದ 12 ವರ್ಷದ 'ಬೂ' ಮೃತಪಟ್ಟಿದೆ. ಎರಡು ವರ್ಷಗಳ ಹಿಂದೆ ತನ್ನ ಪ್ರಿತಿಯ ಗೆಳೆಯ 'ಬಡ್ಡಿ'ಯನ್ನು ಕಳೆದುಕೊಂಡ ಬಳಿಕ ಹೃದಯ ಸಂಬಂಧಿ ರೋಗದಿಂದ ಮೃತಪಟ್ಟಿದೆ ಎಂದು ಅದರ ಮಾಲೀಕ ತಿಳಿಸಿದ್ದಾರೆ.
'ನಮ್ಮ ಮುದ್ದಿನ ಬೂ ನಿದ್ದೆಯಲ್ಲಿಯೇ ಸಾವನ್ನಪ್ಪಿದೆ ಎಂದು ಹೇಳಲು ನನಗೆ ಅತೀವ ನೋವಾಗುತ್ತಿದೆ. ಅವನು ತನ್ನ ಆಪ್ತ ಗೆಳೆಯ ಬಡ್ಡಿಯನ್ನು ಭೇಟಿಯಾಗಲು ತೆರಳಿದ್ದಾನೆ ಎಂದು ಬೂ ಮಾಲೀಕರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಫೇಸ್ಬುಕ್ನಲ್ಲಿ 1.60 ಕೋಟಿ ಅನುಯಾಯಿಗಳನ್ನು ಹೊಂದಿದ್ದ ಬೂ ಅದರ ಜೀವನ ಆಧರಿಸಿ 'Boo: The Life of World's cutest Dog' ಎಂಬ ಪುಸ್ತಕ ಕೂಡ ಪ್ರಕಟವಾಗಿತ್ತು.