ಆಸೀಸ್ ತಂಡದಲ್ಲಿ 6 ವರ್ಷದ ಬಾಲಕನಿಗೆ ಸ್ಥಾನ... ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ಸ್ಪಿನ್ನರ್!
ಎದುರಾಳಿ ಆಸ್ಟ್ರೇಲಿಯಾ ತಂಡದಲ್ಲಿ ಆರು ವರ್ಷದ ಸ್ಪಿನ್ನರ್ಗೆ ಅವಕಾಶ ನೀಡಲಾಗಿದ್ದು, ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾನೆ. ಆರ್ಚೀ ಷಿಲ್ಲರ್ ಎಂಬ ಆರು ವರ್ಷದ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ನೀಡಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ನ್ಯಾಥನ್ ಲಾಯನ್ ಕ್ರೀಡಾಭಿಮಾನಿಯಾಗಿದ್ದು, ಕಾಯಿಲೆಯಿಂದ ಬಳಲುತ್ತಿರುವ ಕಾರಣ ಆತ ಅನೇಕ ವರ್ಷಗಳನ್ನ ಆಸ್ಪತ್ರೆಯ ಬೆಡ್ ಮೇಲೆ ಕಳೆದಿದ್ದಾನೆ. ಇದೀಗ ಆತ ಎಲ್ಲರಂತೆ ಖುಷಿಖುಷಿಯಿಂದ ಇರಲಿ ಎಂಬುದರ ಸಲುವಾಗಿ ಆತನಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಮಾತನಾಡಿರುವ ಬಾಲಕ ಎದುರಾಳಿ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಅಡಿಲೇಡ್ ಕ್ರೀಡಾಂಗಣದಲ್ಲಿ ಆತನು ಕ್ರಿಕೆಟರ್ ಜತೆ ಅಭ್ಯಾಸ ನಡೆಸಿದ್ದು, ಭಾರತದ ವಿರುದ್ಧ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಥನ ಹೆಸರು ಸೇರ್ಪಡೆ ಮಾಡಲಾಗಿದೆ. ಸ್ವತಃ ಕೋಚ್ ಜಸ್ಟಿನ್ ಲ್ಯಾಂಗರ್ ಬಾಲಕನೊಂದಿಗೆ ಮಾತನಾಡಿ, ತಂಡಕ್ಕೆ ಸೇರಿಸಿಕೊಂಡಿದ್ದಾರೆ.