ಟೀಮ್ ಇಂಡಿಯಾವನ್ನು ಹೀಗಳೆದ ಆಸಿಸ್ ಮಾಧ್ಯಮ... ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯನ್ನರು
ಕೃಪೆ: BCCI
ಟೀಮ್ ಇಂಡಿಯಾ ಈಗಾಗಲೇ ಟೆಸ್ಟ್ ಪಂದ್ಯಕ್ಕಾಗಿ ಅಡಿಲೇಡ್ಗೆ ಬಂದಿಳಿದಿದ್ದು ಈ ಫೋಟೋವನ್ನು ಪ್ರಕಟಿಸುವುದರ ಜೊತೆಗೆ ಭಯಗೊಂಡಿರುವ ಬಾವಲಿಗಳು( The Scaredy Bats) ಎಂದು ತಲೆ ಬರಹ ನೀಡಿದೆ.
ಸದ್ಯ ಪತ್ರಿಕೆಯ ಈ ಸಣ್ಣತನವನ್ನು ಆಸ್ಟ್ರೇಲಿಯನ್ನರು ವಿರೋಧಿಸಿದ್ದಾರೆ. ಟ್ವಿಟರ್ನಲ್ಲಿ ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಆಸ್ಟ್ರೇಲಿಯನ್ನರು ಈ ರೀತಿಯ ನಡೆ ದೇಶಕ್ಕೆ ಅವಮಾನ ತರುತ್ತದೆ ಎಂದು ಹೇಳಿದ್ದಾರೆ.
ತಮ್ಮದೇ ದೇಶದ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಬೆನ್ಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ದೇಶಕ್ಕೇ ಕಳಂಕ ತಂದಿರುವ ವಿಚಾರ ಹಸಿಯಾಗಿರುವಾಗಲೇ ಅದೇ ನಾಡಿನ ಮಾಧ್ಯಮ, ಜಂಟಲ್ಮ್ಯಾನ್ ಆಟಕ್ಕೆ ಘನತೆ ತಂದಿರುವ ದೇಶವನ್ನು ಹೀಗಳೆಯುವ ಮೂಲಕ ತನ್ನ ಸಣ್ಣಬುದ್ಧಿ ಪ್ರದರ್ಶನ ಮಾಡಿದೆ.