ವೆಸ್ಟ್ ಇಂಡೀಸ್ ತಂಡದ ನಿವೃತ್ತ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಮತ್ತು ಮಗ ಟಾಗೆನರೈನ್ ಗಯಾನಾ ಪರ ಅರ್ಧಶತಕ ಸಿಡಿಸಿದ್ದಾರೆ. ಸಬೀನಾ ಪಾರ್ಕ್ನಲ್ಲಿ ಪ್ರಾದೇಶಿಕ ನಾಲ್ಕು ದಿನಗಳ ಟೂರ್ನಿ ನಡೆಯುತ್ತಿದ್ದು, ಜಮೈಕಾ ಮತ್ತು ಗಯಾನಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ.
ತಂದೆ ಶಿವನಾರಾಯಣ್ ಚಂದ್ರಪಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 136ನೇ ಶತಕ ಸಿಡಿಸಿದರು. ಇದಕ್ಕೂ ಮುಂಚೆ 20 ವರ್ಷದ ಚಂದ್ರಪಾಲ್ ಮಗ ಟಾಗೆನರೈನ್ ಅರ್ಧಶತಕ ಸಿಡಿದ್ದರು. ಅಲ್ಲದೆ ಗಯಾನಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು.
ಜಮೈಕಾ ತಂಡ 255 ರನ್ ಗಳಿಸಿದ್ದು, ಗಯಾನಾ ತಂಡ ಶಿವನಾರಾಯಣ್ ಹಾಗೂ ಟಾಗೆನರೈನ್ ಅವರ ಆಕರ್ಷಕ ಅರ್ಧಶತಕಗಳ ನೆರವನಿಂದ 262 ರನ್ ಕೂಡಿಹಾಕಿದೆ. ಟಾಗೆನರೈನ್ ತಮ್ಮ ತಂದೆ ಚಂದ್ರಪಾಲ್ರಂತಯೇ ಎಡಗೈ ಬ್ಯಾಟ್ಸ್ಮನ್. ಟಾಗೆನರೈನ್ ಇತ್ತೀಚೆಗೆ ವೆಸ್ಟ್ ಇಂಡೀಸ್ 19 ವರ್ಷದೊಳಗಿನವರ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಟಾಗೆನರೈನ್ಗೆ ಇದು ಮೂರನೇ ಅರ್ಧಶತಕವಾಗಿದೆ. ಚಂದ್ರಪಾಲ್ ಮತ್ತು ಪುತ್ರ 1931ರ ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ತಂದೆ-ಮಗ ಅರ್ಧಶತಕ ಗಳಿಸಿದ ದಾಖಲೆ ಬರೆದರು. 1931ರಲ್ಲಿ ನ್ಯಾಟಿಂಗಹ್ಯಾಮ್ಶೈರ್ ಪರ ಜಾರ್ಜ್ ಗನ್ ಮತ್ತು ಮಗ ಜಾರ್ಜ್ ವೆರ್ನಾನ್ ಅರ್ಧಶತಕ ಸಿಡಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ 164 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿರುವ ಚಂದ್ರಪಾಲ್ ಒಟ್ಟು 11,867 ರನ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಂಡೀಸ್ ಆಟಗಾರರ ಸಾಲಿನಲ್ಲಿ ದಂತಕತೆ ಬ್ರಿಯಾನ್ ಲಾರಾ ಇದ್ದಾರೆ. ಲಾರಾಗಿಂತ ಕೇವಲ 87 ರನ್ಗಳ ಅಂತರದಲ್ಲಿ ಚಂದ್ರಪಾಲ್ ಇದ್ದಾರೆ.