ನಾಲವಾರದ ಕೋರಿಸಿದ್ದೇಶ್ವರ ದೇವರ ಪರಮ ಭಕ್ತರಾದ ಜನಾರ್ದನ ರೆಡ್ಡಿ, ಸರ್ಕಾರ ರಚನೆಯಾಗಲಿ, ಬಿಎಸ್ವೈ ಸಿಎಂ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಶ್ರೀ ಕೋರಿಸಿದ್ದೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪ್ರದಕ್ಷಿಣೆ ಸಲ್ಲಿಸಿ ನಂತರ ಮಾತನಾಡಿದ ಅವರು, ನಾನು ಕೋರಿಸಿದ್ದೇಶ್ವರರ ಪರಮ ಭಕ್ತ. ಇದಕ್ಕೆ ರಾಜಕೀಯ ಲೇಪನ ಮಾಡುವದು ಬೇಡ. ಆದರೆ ನಮ್ಮ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿ ಬೇಡಿಕೊಂಡಿರುವೆ ಎಂದು ಹೇಳಿದರು.