• ಮಂಡ್ಯ: ಆದಿಚುಂಚನಗಿರಿ ಬುಕ್ತಿ ಭವನದ ಎದುರು ಮಗು ಮೇಲೆ ಹರಿದ ಲಾರಿ
  • ತುಮಕೂರು: ವಿಷ ಸೇವಿಸಿ ಡಿ.ಕೆ.ರವಿ ಅತ್ತಿಗೆ ಅಸ್ವಸ್ಥ, ಬಿಜಿಎಸ್ ಆಸ್ಪತ್ರೆಗೆ ದಾಖಲು
ಮುಖಪುಟMoreರಾಜ್ಯ
ಜಿಲ್ಲೆಗಳು
ಬೆಂಗಳೂರು ನಗರ: ಇದು ಕರ್ನಾಟಕದ ರಾಜಧಾನಿಯಾಗಿದೆ. ದಕ್ಷಿಣ ಪ್ರಸ್ಥಭೂಮಿಯ ಮೇಲಿರುವ ಈ ಜಿಲ್ಲೆ, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ 5ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು,ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ 3ನೇ ಸ್ಥಾನದಲ್ಲಿದೆ.
Published 05-Jan-2015 22:24 IST | Updated 15:19 IST
ಬೆಳಗಾವಿ: ಕರ್ನಾಟಕದ ನಾಲ್ಕನೇ ಅತಿ ದೊಡ್ಡ ನಗರ ಇದಾಗಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ. ಚಳಿಗಾಲದ ಅಧಿವೇಶನ ನಡೆಸುವುದಕ್ಕಾಗಿಯೇ ಇಲ್ಲಿ ರಾಜ್ಯದ ಸುವರ್ಣ ಸೌಧವನ್ನು ನಿರ್ಮಿಸಲಾಗಿದೆ.
Published 05-Jan-2015 04:15 IST | Updated 15:27 IST
ಬಳ್ಳಾರಿ: ಐತಿಹಾಸಿಕ ತಾಣ, ಉತ್ತಮ ಕೃಷಿ ಭೂಮಿ ಹಾಗೂ ಸಂಪದ್ಭರಿತ ಖನಿಜಗಳಿಂದ ಕೂಡಿರುವ ಬಳ್ಳಾರಿ ಶ್ರೀಮಂತ ಜಿಲ್ಲೆಯಾಗಿದೆ. ಗಣಿ ಉದ್ಯಮದಿಂದ ದೇಶದ ಗಮನವನ್ನು ತನ್ನತ್ತ ಸೆಳೆದಿದೆ.
Published 05-Jan-2015 21:23 IST | Updated 15:26 IST
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಜಿಲ್ಲೆಯನ್ನು ವಿಭಜಿಸಿ 1986ರಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ರಚಿಸಲಾಯಿತು. ಪ್ರಸ್ತುತ ಗ್ರಾಮಾಂತರ ಜಿಲ್ಲೆಯು 2 ವಿಭಾಗಗಳು, ನಾಲ್ಕು ತಾಲೂಕು ಕೇಂದ್ರಗಳನ್ನು ಹೊಂದಿದೆ.
Published 04-Nov-2014 16:36 IST
1997ರಲ್ಲಿ ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತು. ಬೆಳಗಾವಿ, ಕೊಪ್ಪಳ, ರಾಯಚೂರು, ವಿಜಯಪುರ, ಗದಗ ಜಿಲ್ಲೆಗಳ ಗಡಿಗಳಿಗೆ ಈ ಜಿಲ್ಲೆಯ ಗಡಿ ಹೊಂದಿಕೊಂಡಿದೆ.
Published 26-Jul-2014 19:33 IST | Updated 15:31 IST
ಬೀದರ್: ಐತಿಹಾಸಿಕ ನಗರವಾದ ಬೀದರ್ ಜಿಲ್ಲಾಡಳಿತ ಕೇಂದ್ರವಾಗಿದೆ. ರಾಜ್ಯದ ಈಶಾನ್ಯ ಭಾಗದಲ್ಲಿರುವ ಇದು, ಪೂರ್ವಕ್ಕೆ ಆಂಧ್ರ ಪ್ರದೇಶ, ಉತ್ತರ ಮತ್ತು ಪಶ್ಚಿಮಕ್ಕೆ ಮಹಾರಾಷ್ಟ್ರ ಹಾಗೂ ದಕ್ಷಿಣಕ್ಕೆ ಗುಲ್ಬರ್ಗ ಜಿಲ್ಲೆಯ ಗಡಿಗಳಿಂದ ಆವೃತವಾಗಿದೆ. 1956ರವರೆಗೆ ಈ ಜಿಲ್ಲೆಯು ಹೈದ್ರಾಬಾದ್ ರಾಜ್ಯದಲ್ಲಿತ್ತು.
Published 08-Aug-2014 13:00 IST | Updated 15:37 IST
ಚಾಮರಾಜನಗರ: ಮೈಸೂರು ಜಿಲ್ಲೆಯನ್ನು ವಿಭಜಿಸಿ 1998ರಲ್ಲಿ ಈ ಜಿಲ್ಲೆಯನ್ನು ರಚಿಸಲಾಯಿತು. ಚಾಮರಾಜನಗರ ಜಿಲ್ಲಾ ಕೇಂದ್ರವಾಗಿದೆ. ಕ್ರಿ.ಶ. 1117ರಲ್ಲಿ ಹೊಯ್ಸಳ ಅರಸ ಗಂಗರಾಜನ ಸೇನಾಧಿಕಾರಿ ಪುನಿಸದಾನಂದ ನಾಯಕ ಎಂಬುವವನು ಇಲ್ಲಿನ ಜೈನರ ಪವಿತ್ರ ಬಸದಿಯಾದ ವಿಜಯ ಪಾರ್ಶ್ವನಾಥ ಬಸದಿ ನಿರ್ಮಿಸಿದ್ದಾನೆ.
Published 08-Aug-2014 15:54 IST | Updated 15:40 IST
ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲೆಯನ್ನು ವಿಭಜಿಸಿ ಗೌರಿಬಿದನೂರು, ಗುಡಿಬಂಡ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳನ್ನು ಸೇರಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರು ಉತ್ತರ ಭಾಗದೊಂದಿಗೆ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ.
Published 08-Aug-2014 16:57 IST | Updated 15:46 IST
ಭಾರತದಲ್ಲಿ ಮೊದಲ ಬಾರಿಗೆ ಕಾಫಿ ಬೆಳೆಯನ್ನು ಬೆಳೆದಿದ್ದು ಇದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ.
Published 28-Jul-2014 16:38 IST | Updated 15:54 IST
ಚಿತ್ರದುರ್ಗ ನಗರ ಜಿಲ್ಲೆಯ ಪ್ರಧಾನ ಕೇಂದ್ರವಾಗಿದೆ. ಇಲ್ಲಿಯ ಬೃಹದಾಕಾರದ ಛತ್ರಿ ಆಕಾರದ ಚಿತ್ರಕಲಾದುರ್ಗ ಎಂಬ ಬೆಟ್ಟದಿಂದ ಜಿಲ್ಲೆಗೆ ಚಿತ್ರದುರ್ಗ ಎಂಬ ಹೆಸರು ಬಂದಿದೆ. ಈ ಜಿಲ್ಲೆಯು ರಾಮಾಯಣ ಹಾಗೂ ಮಹಾಭಾರತದ ಕಾಲಮಾನದಷ್ಟು ಪ್ರಾಚೀನ ಇತಿಹಾಸ ಹೊಂದಿದೆ.
Published 26-Jul-2014 18:57 IST | Updated 15:57 IST
ವಿಜಯಪುರ: ಗೊಮ್ಮಟ ನಗರ ಎಂದೇ ಖ್ಯಾತವಾಗಿರುವ ವಿಜಯಪುರ ನಗರ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರಿನಿಂದ ವಾಯವ್ಯಕ್ಕೆ 530 ಕಿ.ಮೀ. ದೂರದಲ್ಲಿದೆ. ಆದಿಲ್ ಶಾಹಿಗಳ ಆಡಳಿತಾವಧಿಯಲ್ಲಿ ನಿರ್ಮಿಸಲ್ಪಟ್ಟ ಐತಿಹಾಸಿಕ ಸ್ಮಾರಕಗಳಿಂದ ಈ ಜಿಲ್ಲೆ ಪ್ರಸಿದ್ಧವಾಗಿದೆ.
Published 08-Aug-2014 13:09 IST | Updated 16:00 IST
ದಕ್ಷಿಣ ಕನ್ನಡ: ಇದು ರಾಜ್ಯದ ಕರಾವಳಿ ಜಿಲ್ಲೆಯಾಗಿದೆ. ಈ ಜಿಲ್ಲೆಯು ಉತ್ತರ ಭಾಗಕ್ಕೆ ಉಡುಪಿ, ಈಶಾನ್ಯ ಭಾಗಕ್ಕೆ ಚಿಕ್ಕಮಗಳೂರು, ಪೂರ್ವಕ್ಕೆ ಹಾಸನ, ಆಗ್ನೇಯಕ್ಕೆ ಕೊಡಗು ಹಾಗೂ ದಕ್ಷಿಣಕ್ಕೆ ಕೇರಳದ ಕಾಸರಗೋಡಿನ ಗಡಿಗಳಿಗೆ ಹೊಂದಿಕೊಂಡಿದೆ.
Published 05-Jan-2015 21:02 IST | Updated 17:27 IST
ಗದಗ: ಇದು 1997ರಲ್ಲಿ ಧಾರವಾಡ ಜಿಲ್ಲೆಯಿಂದ ವಿಭಜನೆಯಾಗಿ ರಚನೆಯಾದ ಜಿಲ್ಲೆಯಾಗಿದೆ. ಈ ಜಿಲ್ಲೆಯ ಗಡಿಯು ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಗಡಿಗಳಿಂದ ಕೂಡಿದೆ.
Published 05-Jan-2015 22:10 IST | Updated 16:12 IST
ಧಾರವಾಡ: ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿವೆ. ಬೆಂಗಳೂರಿನ ನಂತರ ರಾಜ್ಯದ ಎರಡನೇ ದೊಡ್ಡ ನಗರವಾಗಿದ್ದು, ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.
Published 08-Aug-2014 14:19 IST | Updated 16:34 IST