ರೋಗ ಮುಕ್ತ ಜೀವನ... ಒಂದು ಆಸನದಿಂದ ನೂರಾರು ರೋಗ ದೂರ
ಈ ಭಂಗಿಯಿಂದ ದೇಹದ ಮೇಲ್ಭಾಗ ಅಂದರೆ ತೋಳುಗಳು, ಭುಜಗಳು ಮತ್ತು ಹೊಟ್ಟೆಯು ಬಲಗೊಳ್ಳುತ್ತದೆ. ಈ ಆಸನದ ಕೆಲವು ಪ್ರಯೋಜನಗಳು ಇಂತಿವೆ.
ರಿವರ್ಸ್ ಯೋಗ ಪ್ರೇಯರ್ ಮಾಡುವಾಗ ಆಗುವ ಭುಜಗಳ ಚಲನೆಯಿಂದ ಹೃದಯವು ತೆರೆದುಕೊಳ್ಳುತ್ತದೆ ಮತ್ತು ಜೀರ್ಣಕ್ರಿಯೆಯು ಸರಾಗವಾಗುತ್ತದೆ. ಇದರಿಂದ ಉಸಿರಾಟವೂ ಸರಾಗವಾಗುತ್ತದೆ. ದೇಹದ ಚಯಾಪಚಯ ಕ್ರಿಯೆ ಮತ್ತು ಶಕ್ತಿಯ ಪ್ರಮಾಣವೂ ಸುಸ್ಥಿರವಾಗಿರುತ್ತದೆ.
ಭುಜಗಳ ಚಲನೆಯಿಂದ ಮಣಿಗಂಟುಗಳು ಬಲಗೊಳ್ಳುತ್ತವೆ ಹಾಗೂ ಇದು ಕಾರ್ಪಲ್ ಟನೆಲ್ ಸಿಂಡ್ರೋಮ್ ಮತ್ತು ಮಣಿಗಂಟಿನ ನೋವಿನಿಂದ ಬಳಲುವ ವ್ಯಕ್ತಿಗಳಿಗೆ ತುಂಬಾ ಒಳ್ಳೆಯ ಆಸನವಾಗಿದೆ. ನೀವು ದಿನವೊಂದಕ್ಕೆ 500 ಶಬ್ದಗಳನ್ನು ಟೈಪ್ ಮಾಡುತ್ತಿದ್ದರೆ, ಆ ಬಳಿಕ ಈ ಸರಳ ಯೋಗಾಸನ ಮಾಡಿದರೆ ನಿಮ್ಮ ಮಣಿಗಂಟುಗಳು ಸಡಿಲವಾಗುತ್ತದೆ ಮತ್ತು ಯಾವುದೇ ಹಾನಿಯಾಗುವುದಿಲ್ಲ. ಮಣಿಗಂಟಿನಲ್ಲಿ ಹಲವಾರು ಆಕ್ಯುಪಂಕ್ಚರ್ ಬಿಂದುಗಳಿದ್ದು, ಇದು ಯೋಗಾಸನ ಮಾಡುವಾಗ ಸಕ್ರಿಯವಾಗುತ್ತದೆ.
ಪಶ್ಚಿಮ ನಮಸ್ಕಾರಾಸನದಿಂದ ಬಿಗಿಯಾಗಿರುವ ಭುಜಗಳ ಸ್ನಾಯುಗಳಿಗೆ ಮಸಾಜ್ ಮಾಡಿದಂತಾಗಿ ಅವುಗಳು ಸಡಿಲವಾಗುತ್ತವೆ. ಹಾಗೂ ಆತಂಕಗೊಂಡಿರುವ ಮನಸ್ಸಿಗೆ ಶಾಂತಿ ನೀಡುತ್ತದೆ. ಮನಸ್ಸು ಶಾಂತವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಆದ್ದರಿಂದ ನೀವು ಉದ್ಯೋಗ ಅಥವಾ ಮನೆಗೆ ಸಂಬಂಧಿಸಿದ ಒತ್ತಡಗಳನ್ನು ಈ ಸರಳ ಯೋಗ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಶಾಂತವಾದ ಮನಸ್ಸು ಒತ್ತಡ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ.
ಇಷ್ಟು ಮಾತ್ರವಲ್ಲದೆ ಈ ಆಸನವನ್ನು ಪ್ರತಿದಿನ ನೀವು ಫ್ರೀ ಇರುವಾಗ ಮಾಡುತ್ತ ಬಂದರೆ ಹಲವಾರು ರೋಗಗಳು ದೂರವಾಗುತ್ತವೆ.