ಹೌದು, ರಚಿತಾ ರಾಮ್ ಕಿರುಚಿತ್ರವೊಂದನ್ನು ನಿರ್ಮಿಸ್ತಿದ್ದಾರೆ. ಅದರ ಹೆಸರು 'ರಿಷಭಪ್ರಿಯಾ'. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಇದರಲ್ಲಿ ಮೊಟ್ಟಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸ್ತಿದ್ದಾರೆ.
ಶ್ರೀ ಮಹದೇವ್ ನಾಯಕನಾಗಿರುವ ರಿಷಭಪ್ರಿಯಾದಲ್ಲಿ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ ಕೂಡಾ ಪ್ರಮುಖ ಪಾತ್ರಗಳಲ್ಲಿ ಸಾಥ್ ಕೊಡಲಿದ್ದಾರೆ. ಚರಣ್ ರಾಜ್ ಸಂಗೀತ ಇದಕ್ಕಿದೆ. ತಮ್ಮ ತಂಡವನ್ನು ಪರಿಚಯಿಸಿರೋ ರಿಷಭಪ್ರಿಯಾ ತಂಡ ಹೊಸತೇನನ್ನೋ ಕೊಡುವ ಭರವಸೆ ಮೂಡಿಸಿದೆ. ಆರ್.ಜೆ. ಮಯೂರ ರಾಘವೇಂದ್ರ ಈ ಕಿರುಚಿತ್ರದ ನಿರ್ದೇಶಕ.

ಕೇವಲ ನಟನೆ ಮಾತ್ರವಲ್ಲದೇ ಬೇರೆನೆನ್ನಾದ್ರೂ ಮಾಡುವ ಮೂಲಕ ಬಹುಕಾಲ ಚಿತ್ರರಂಗದ ಜೊತೆ ನಂಟು ಹೊಂದಿರಬೇಕು ಎನ್ನುವುದು ರಚಿತಾರಾಮ್ ಬಯಕೆ. ಅದಕ್ಕೆ ಅವರ ಗೆಳೆಯ ಮಯೂರ ರಾಘವೇಂದ್ರ ಕಿರುಚಿತ್ರ ಮಾಡುವ ಪ್ಲಾನ್ ಕೊಟ್ರಂತೆ. ಕಥೆ ಕೇಳಿ ಮೆಚ್ಚಿಕೊಂಡ ರಚಿತಾ ನಿರ್ಮಾಣಕ್ಕೆ ಜೈ ಎಂದಿದ್ದಾರೆ.

ಇನ್ನು ರಾಗಿಣಿ ಚಂದ್ರನ್ ಈ ಚಿತ್ರದಲ್ಲಿ ನಟಿಸಲು ಒಪ್ಪುವ ಮುನ್ನ ನಿರ್ದೇಶಕ ಮಯೂರ್ ಪ್ರಜ್ವಲ್ಗೆ ಈ ಕಥೆ ಹೇಳಿದ್ರಂತೆ. ಪ್ರಜ್ವಲ್ ಇದಕ್ಕೆ ಓಕೆ ಎಂದಮೇಲೆ ರಾಗಿಣಿ ನಟಿಸ್ತಿದ್ದಾರೆ. ಹೊಸತನದಿಂದ ಕೂಡಿರುವ ಈ ಸಬ್ಜೆಕ್ಟ್ ವೀಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಚಿತ್ರತಂಡದ್ದು. ಈ ಕಿರುಚಿತ್ರ ಗೆದ್ದರೆ ರಚಿತಾ ಭವಿಷ್ಯದಲ್ಲಿ ಮತ್ತಷ್ಟು ಕಿರುಚಿತ್ರ ನಿರ್ಮಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.