ಬಾವಿ ಕುಸಿದು ಓರ್ವ ಸಾವು, ಮೂವರಿಗೆ ಗಾಯ... ಕುಂದಾಪುರ ಬಳಿ ದುರ್ಘಟನೆ
ಮೃತನನ್ನು ಗೋಪಾಲ ಮೊಗವೀರ ಎಂದು ಗುರತಿಸಲಾಗಿದೆ. ಬಾವಿ ಕೆಲಸ ಮಾಡುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಾವಿ ಕುಸಿದಿದ್ದರಿಂದ ಕಲ್ಲು ಮಣ್ಣಿನಡಿ ವ್ಯಕ್ತಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಟಾಚಿ, 2 ಜೆಸಿಬಿ ಮೂಲಕ ಸತತ ಮೂರು ಗಂಟೆಗಳ ಕಾಲ ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಮೃತದೇಹ ಮೇಲಕ್ಕೆತ್ತಲಾಗಿದೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.