ಹುಡುಗಿಗೆ ಲೈಂಗಿಕ ಕಿರುಕುಳ ಆರೋಪ: ಹುಡುಗರಿಗೆ ಥಳಿಸಿ, ಬೆತ್ತಲೆ ಮೆರವಣಿಗೆ.. ವಿಡಿಯೋ
ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹುಡುಗಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆ ಹಿನ್ನಲೆಯಲ್ಲಿ ಗ್ರಾಮಸ್ಥರು ಅವರ ಮೇಲೆ ಕ್ರೂರವಾಗಿ ವರ್ತನೆ ಮಾಡಿ, ಹಿಗ್ಗಾಮುಗ್ಗಾ ಥಳಿಸಿ ತದನಂತರ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ್ದಾರೆ.
ಪುಣೆಯ ಕಾರ್ವೆ ನಗರ ಬೀದಿಯಲ್ಲಿ ಅವರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ಜೊತೆಗೆ ಅದರ ವಿಡಿಯೋ ಸಹ ಚಿತ್ರೀಕರಣ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹುಡುಗನೊಬ್ಬನ ತಾಯಿ ವೀಡಿಯೊವನ್ನು ವೀಕ್ಷಿಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹುಡುಗಿಯ ತಂದೆ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ.
ನವಿನ್ ಖುರಾನಾ (47), ಯಶ್ ನವನ್ ಖುರಾನಾ (19), ರಾಜು ದೇವಿಸಿ (24) ಮತ್ತು ಪ್ರದೀಪ್ ಸಲುಂಕೆ (35) ಎಂಬುವವರು ಬಂಧಿತ ಆರೋಪಿಗಳು.