ಖರ್ಚಿಗೆ ಹಣ ಇಲ್ಲದಿದ್ದಾಗ ಜನರ ಸುಲಿಗೆ... ಬೆಂಗಳೂರಲ್ಲಿ ಚಪಾತಿ ಸೇರಿ ಮೂವರು ಅಂದರ್
ಆರೋಪಿಗಳು ನಂದಿನಿ ಲೇಔಟ್ ನಿವಾಸಿಗಳಾಗಿದ್ದು, ಬಂಧಿತರನ್ನು ಕಾರ್ತಿಕ್, ರಾಜು, ಮನೋಜ್ ಅಲಿಯಾಸ್ ಚಪಾತಿ ಎಂದು ಗುರುತಿಸಲಾಗಿದೆ.
ಬಂಧಿತರು ತಮ್ಮಲ್ಲಿ ಖರ್ಚಿಗೆ ಹಣವಿಲ್ಲದಿದ್ದಾಗ ಅರ್ಜೆಂಟ್ ಕೆಲಸ ಇದೆ ಎಂದು ಸ್ನೇಹಿತರ ಬೈಕ್ ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ದಾರಿಹೋಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ನಂತರ ಆರೋಪಿಗಳು ಕದ್ದ ಮೊಬೈಲನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಈ ಮೊದಲೇ ಸ್ನೇಹಿತರಿಗೆ ಹೇಳಿದಂತೆ ಒಂದೇ ಗಂಟೆಯಲ್ಲಿ ಬೈಕನ್ನು ವಾಪಸ್ ನೀಡುತ್ತಿದ್ದರು.
ಇನ್ನು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ 2 ಬೈಕ್ ಸೇರಿದಂತೆ 16 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ.