ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ನಲ್ಲಿ ವಕೀಲರಿಗೆ ಯಾವುದೇ ಸವಲತ್ತನ್ನು ನೀಡದೇ ಮಲತಾಯಿ ಧೋರಣೆ ಮಾಡುತ್ತಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಇನ್ನು ಬೆಂಗಳೂರು ವಕೀಲರ ಸಂಘದ ಎ.ಪಿ.ರಂಗನಾಥ್ ಮಾತಾನಾಡಿ, ವಕೀಲರ ವಿರೋಧಿ ನೀತಿಯಿಂದ ರಾಷ್ಟ್ರವ್ಯಾಪಿ ಹೋರಾಟ ಮಾಡಲಾಗ್ತಿದೆ. ರಾಷ್ಟ್ರಾದ್ಯಂತ ವಕೀಲರು ಇಂದು ಬೀದಿಗಿಳಿದಿದ್ದೇವೆ. ನ್ಯಾಯಾಲಯಗಳ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ಮಾಡ್ತಿದ್ದೇವೆ. ಇಂದು ನಾವು ವಕೀಲರ ಪರವಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ವಕೀಲರ ಕ್ಷೇಮಾಭಿವೃದ್ಧಿಗಾಗಿ 5000 ಕೋಟಿ ರೂ. ಮೀಸಲಿಡೋದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದ್ರೆ ಏನೂ ಮಾಡಿಲ್ಲ. ಹಾಗಾಗಿ ನಮಗೆ ಹೆಲ್ತ್ ಇನ್ಶೂರೆನ್ಸ್ , ವಕೀಲರಿಗಾಗಿ ವೆಲ್ಫೇರ್ ಸ್ಕೀಂ ರಚಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.