ಸಂಗ್ರಹ ಚಿತ್ರ: ರುದ್ರೇಶ್
ಬೆಂಗಳೂರಿನ ಎನ್ಐಎ ನ್ಯಾಯಾಲಯದಲ್ಲಿ ಇಂದು ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಎಸ್ಡಿಪಿಐ ಮತ್ತು ಪಿಪಿಎಫ್ ಸಂಘಟನೆಗೆ ಸೇರಿದ ಐವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಾದ ಆಜಿಮ್ ಷರೀಫ್, ಮೊಹಮದ್ ಮುಜೀಬುಲ್ಲಾ, ಮೊಹಮದ್ ಮಜರ್, ವಾಸಿಮ್ ಅಹಮದ್ ಮತ್ತು ಇರ್ಫಾನ್ ಪಾಷ ಎಂಬುವರ ವಿರುದ್ಧ ಚಾರ್ಜ್ಶೀಟ್ ಹಾಕಲಾಗಿದೆ.
ಆಜಿಮ್ ಷರೀಫ್ ಎಸ್ಡಿಪಿಐ ಸಂಘಟನೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷನಾಗಿದ್ದಾನೆ. 2016ರ ಅಕ್ಟೋಬರ್ 16ರಂದು ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ ರುದ್ರೇಶ್ರನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಮೊದಲು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತೀಯ ವಾದಿ ಸಂಘಟನೆಗಳ ಕೈವಾಡ ರುದ್ರೇಶ್ ಕೊಲೆ ಹಿಂದೆ ಇದೆ ಎಂಬ ಶಂಕೆ ಮೇಲೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು.
ಐವರು ಆರೋಪಿಗಳು ರುದ್ರೇಶ್ ಕೊಲೆಗೂ ಮೊದಲು ಶಿವಾಜಿನಗರದ ಮಸೀದಿಯೊಂದರಲ್ಲಿ ಸಭೆ ನಡೆಸಿದ್ದರು. ಆರ್ಸ್ಎಸ್ ಗಣವೇಷದಲ್ಲಿರುವ ವ್ಯಕ್ತಿಯೊಬ್ಬನನ್ನು ಕೊಲ್ಲಬೇಕು ಅನ್ನೋದು ಆ ಸಭೆಯಲ್ಲಿ ನಿರ್ಧಾರವಾಗಿತ್ತು. ಆರ್ಎಸ್ಎಸ್ ಮುಖಂಡರನ್ನು ಕೊಂದು ಕೋಮು ದ್ವೇಷ ಸೃಷ್ಟಿಸುವ ಸಂಚನ್ನು ಆರೋಪಿಗಳು ಹೊಂದಿದ್ದರು ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.